Published
1 year agoon
By
Akkare News
ಪುತ್ತೂರು:ಲಿಟ್ಲ್ ಫ್ಲವರ್ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲದ ಪದಗ್ರಹಣ ಕಾರ್ಯಕ್ರಮವು ಶಾಲಾ ಸಂಚಾಲಕಿ ವಂದನೀಯ ಭಗಿನಿ ಪ್ರಶಾಂತಿ ಬಿ ಎಸ್ ಅಧ್ಯಕ್ಷ ತೆಯಲ್ಲಿ ನೆರವೇರಿತು. ಅಕ್ಕರೆ ನ್ಯೂಸ್ ಪುತ್ತೂರು ಇದರ ಸಂಸ್ಥಾಪಕರು, ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶ್ರೀ ಜಯ ಪ್ರಕಾಶ್ ಬದಿನಾರು ಉದ್ಘಾಟನೆ ನೆರವೇರಿಸಿ ಮಾತನಾಡಿ ಭಾರತ ಪ್ರಜಾಪ್ರಭುತ್ವ ದೇಶ, ನಾಯಕತ್ವ ಭಾರತೀಯರ ರಕ್ತದಲ್ಲಿದೆ, ಭವ್ಯ ಭವಿಷ್ಯದ ನಾಯಕರನ್ನು ಸೃಷ್ಟಿ ಸುವ ಕೆಲಸ ಶಾಲೆಯಿಂದಲೇ ಆರಂಭ ವಾಗುವುದು ಉತ್ತಮ ಬೆಳವಣಿಗೆ, ಇಲ್ಲಿನ ಮಕ್ಕಳ ಶಿಸ್ತು ಅನುಕರಣೀಯ ಎಂದರು.ವೇದಿಕೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರು, ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇಲ್ಲಿನ ವ್ಯವಸ್ಥಾಪನ ಸಮಿತಿ ಸದಸ್ಯರು ಶ್ರೀ ವಿನಯ ಸುವರ್ಣ ಹಾಗೂ ಮುಖ್ಯ ಶಿಕ್ಷಕಿ ಭಗಿನಿ ಪ್ರಶಾಂತಿ ಬಿ ಎಸ್ ಉಪಸ್ಥಿತರಿದ್ದರು.





ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ನೂತನ ಮಂತ್ರಿಮಂಡಲದ ಸದಸ್ಯರಿಗೆ ಪ್ರಮಾಣ ವಚನ ಭೋದಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಿಕ್ಷಕಿ ವಿಲ್ಮಾ ಫೆರ್ನಾಂಡಿಸ್ ವಂದಿಸಿದರು ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ದಿವ್ಯ, ಪ್ರಮೀಳಾ ಪ್ರೀತಿ, ನಳಿನಾಕ್ಷಿ, ಸಾತ್ವಿಕ ಮತ್ತು ಶಿವಪ್ರಿಯ ವಿವಿಧ ಜವಾಬ್ದಾರಿ ನಿರ್ವಹಿಸಿದರು.





