Published
12 months agoon
By
Akkare News
ಪುತ್ತೂರು: ಮದುವೆಯಾಗುದಾಗಿ ನಂಬಿಸಿ ಯುವತಿಯನ್ನು ಗರ್ಭವತಿ ಮಾಡಿದ ಪ್ರಕರಣದಲ್ಲಿ ಸಂತ್ರಸ್ತೆ ಮನೆಗೆ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ ನಂಜುಂಡಿ ಭೇಟಿ ನೀಡಿದ್ದಾರೆ.



ಮಾಧ್ಯಮದೊಂದಿಗೆ ಮಾತನಾಡಿದ ಅವರು ತಂದೆ ಯಾವ ಮನೆಯಲ್ಲೂ ಈ ರೀತಿ ಆಗಬಾರದು ತಂದೆ ತಾಯಿ ತುಂಬಾ ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಾರೆ. ಮಕ್ಕಳು ಕೂಡ ಯೋಚನೆ ಮಾಡಬೇಕಿತ್ತು. ಆದರೆ ಎರಡೂ ಕಡೆಯಿಂದ ತಪ್ಪಾಗಿ ಹೋಗಿದೆ. ಮುಚ್ಚಿ ಹೋಗುವಂತಹ ತಪ್ಪಾಗಿದ್ದರೆ ಇದು ಬೆಳಕಿಗೆ ಬರ್ತಿರಲಿಲ್ಲ, ಆದರೆ ಇದು ಬೆಳಕಿಗೆ ಬಂದಿದೆ. ಆ ಮಗುವಿಗೆ ತಂದೆ ಬೇಕು. ಸಮಾಜದಲ್ಲಿ ಯಾರಿಗೇ ಆಗಲಿ ತಂದೆ ಇರಬೇಕು. ತಂದೆ ಇಲ್ಲಂದ್ರೆ ಎಷ್ಟು ಕಷ್ಟ ಅಂತ ಎಲ್ಲರಿಗೂ ಗೊತ್ತು. ಇಡೀ ವಿಶ್ವಕರ್ಮ ಸಮಾಜ ಯುವತಿಗೆ ನ್ಯಾಯ ಸಿಗಬೇಕೆಂದು ನಿಲುವನ್ನು ತೆಗೆದುಕೊಂಡಿದ್ದೇವೆ. ಯಾವ ಹಂತಕ್ಕೆ ಬೇಕಾದರೂ ಕಾನೂನು ಮೂಲಕ ಹೋರಾಟ ಮಾಡುತ್ತೇವೆ ಎಂದು ಹೇಳಿದರು.











