Published
2 weeks agoon
By
Akkare News
ಬೆಂಗಳೂರು: ವಾಹನವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದರೂ ಸಹ, ಅಧಿಕೃತವಾಗಿ ನೋಂದಣಿ ಪ್ರಮಾಣಪತ್ರದಲ್ಲಿ (RC) ಮಾಲೀಕತ್ವ ವರ್ಗಾವಣೆಯಾಗುವವರೆಗೆ ಅಪಘಾತಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಹೊಣೆಗಾರಿಕೆಗಳು ನೋಂದಾಯಿತ ಮಾಲೀಕರದ್ದೇ ಆಗಿರುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ:
ಮಾರತಹಳ್ಳಿಯ ಸುನಿಲ್ ಕುಮಾರ್ ಎಂಬುವವರು ತಮ್ಮ ಬೈಕನ್ನು ಶಬ್ರೇಜ್ ಎಂಬುವವರಿಗೆ ಮಾರಾಟ ಮಾಡಿದ್ದರು. ಈ ಬೈಕ್ 2020ರ ಜೂನ್ 18ರಂದು ಹನುಮಂತ ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದರು. ಮೃತರ ಕುಟುಂಬದವರು ಪರಿಹಾರ ಕೋರಿ ಮೋಟಾರು ಅಪಘಾತ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯದ ಆದೇಶ:
ವಿಮಾ ದಾಖಲೆಗಳಲ್ಲಿನ ಸಮಸ್ಯೆಯಿಂದಾಗಿ, ನೋಂದಾಯಿತ ಮಾಲೀಕರೇ ಪರಿಹಾರ ನೀಡಬೇಕು ಎಂದು ನ್ಯಾಯಮಂಡಳಿ ಈ ಹಿಂದೆ 33 ಲಕ್ಷ ರೂ. ಪರಿಹಾರ ನಿಗದಿಪಡಿಸಿತ್ತು.
ಪರಿಹಾರ ಹೆಚ್ಚಳ: ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಜಿ. ಪಂಡಿತ್ ಮತ್ತು ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠವು, ಸುಪ್ರೀಂ ಕೋರ್ಟ್ನ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿ ಮಾಲೀಕತ್ವ ವರ್ಗಾವಣೆಯಾಗದ ಹೊರತು ಮೊದಲ ಮಾಲೀಕನೇ ಹೊಣೆ ಎಂದು ಹೇಳಿದೆ. ಮೃತರ ಕುಟುಂಬಕ್ಕೆ 47.15 ಲಕ್ಷ ರೂ. ಪರಿಹಾರ ಪಾವತಿಸುವಂತೆ ಹೈಕೋರ್ಟ್ ಈಗ ಆದೇಶಿಸಿದೆ.

ಟೋಲ್ ಬೂತ್ಗಳಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡಲು ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಎಲ್ಲಾ ಟೋಲ್ ಗಳನ್ನ ಡಿಜಿಟಲೀಕರಣಗೊಳಿಸುವ ನಿರ್ಧಾರಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.




