Connect with us

ಸ್ಥಳೀಯ

ಶಬರಿಮಲೆಯ ಪಂದಳ ಮಹಾರಾಜ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ,

Published

on

ಪುತ್ತೂರು: ವಿಶ್ವಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದಿವ್ಯ ಆಭರಣಗಳ (ತಿರುವಾಭರಣ) ರಕ್ಷಕರಾದ ಪಂದಳ ರಾಜಮನೆತನದ ಮಹಾರಾಜ ಪುಣರ್ತಂ ನಾರಾಯಣ ವರ್ಮಾ ಅವರು ಎ.12ರಂದು ರಾತ್ರಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.

ಹನುಮಗಿರಿಯ ಬ್ರಹ್ಮಕಲಶೋತ್ಸವಕ್ಕೆ ಆಗಮಿಸಿದ ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ವಿಷಯನ್ನು ತಿಳಿದು ದೇವಳಕ್ಕೆ ಭೇಟಿ ನೀಡಿದರು. ದೇವಳದ ಪ್ರಧಾನ ಅರ್ಚಕರಾದ ವೇ ಮೂ ವಿ.ಎಸ್ ಭಟ್ ಮತ್ತು ವೇ ಮೂ ವಸಂತ ಕೆದಿಲಾಯ ಅವರು ಪಂದಳ ರಾಜರಿಗೆ ಪ್ರಸಾದ ನೀಡಿ ಗೌರವಿಸಿದರು. ಈ ಸಂದರ್ಭ ನ್ಯಾಯವಾದಿ ಮಹೇಶ್ ಕಜೆ, ದೀಪಿಕಾ ಕಜೆ, ಹನುಮಗಿರಿ ಬ್ರಹ್ಮಕಲಶೋತ್ಸವ ಸಮಿತಿಯ ಆರ್.ಸಿ.ನಾರಾಯಣ, ದೇವಳದ ಭದ್ರತಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement