Connect with us

ಇತರ

ಪುತ್ತೂರು ತಾಲೂಕಿನಾದ್ಯಂತ ನಿರಂತರ ಅಪಘಾತ ಮರಣ ದೇವರ ಮೊರೆ ಹೋದ ಶಾಸಕ ಅಶೋಕ್ ಕುಮಾರ್ ರೈ ನಾಳೆ (ಮೇ 12) ಪುತ್ತೂರು ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮೃತ್ಯುಂಜಯ ಹೋಮ

Published

on

 ಪುತ್ತೂರಿನ ಜನಪ್ರಿಯ ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಹತ್ತೂರ ಒಡೆಯ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಮೃತ್ಯುಂಜಯ ಪೂಜೆಯನ್ನು ಮೇ12ರಂದು ಆಯೋಜಿಸಲಾಗಿದೆ. ಇತ್ತೀಚೆಗೆ ಪುತ್ತೂರಿನಲ್ಲಿ ವಿಪರೀತ ಮಟ್ಟದಲ್ಲಿ ರಸ್ತೆ ಅಪಘಾತಗಳು ನಡೆದು ಜೀವ ಹಾನಿಯಾಗುತ್ತಿದೆ, ಹಲವಾರು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜನರ ಹಿತದೃಷ್ಟಿಯಿಂದ ಮೃತ್ಯುಂಜಯ ಸೂಕ್ತ ಜಪ 1008 ಸಂಖ್ಯೆಯಿಂದ ಅನೇಕ ವೈದಿಕರಿಂದ ನಡೆಯಲಿದೆ. ಬೆಳಗ್ಗೆ 9:30 ರಿಂದ 11:30 ರ ತನಕ ಪೂಜೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಯಾವುದೇ ಅಪಘಾತಗಳು ನಡೆಯದಿರಲಿ ಎಂದು ದೇವರ ಮೊರೆ ಹೋಗಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement