Published
1 day agoon
By
Akkare News
ಕಾವೇರಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಉದಯನಿಧಿ ಸ್ಟಾಲಿನ್ ನಾಲಿಗೆ ಹರಿ ಬಿಟ್ಟಿದ್ದರು. ಭಾಷಣ ವೇಳೆ ನಟ ವಿಜಯ್ ಹಾಗೂ ತ್ರಿಶಾ ಸಂಬಂಧ ಕುರಿತು ಮಾತನಾಡಿದ್ದರು. ಭಾಷಣ ಮಾಡುವಾಗ ಅಭಿಮಾನಿಗಳು ತ್ರಿಶಾ…ತ್ರಿಶಾ…ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಉದಯನಿಧಿ ಭಾಷಣ ಮಧ್ಯ ಕೊಂಚ ವಿರಾಮ ನೀಡಿ ಡಬಲ್ ಮೀನಿಂಗ್‌ನಲ್ಲಿ ‘ತಮಿಳುನಾಡಿಗೆ ಒಂದು ಹನಿ ನೀರು ಬಂದಿಲ್ಲ. ಸಿಎಂ ವಿಜಯ್‌ಗೆ ಈ ಬಗ್ಗೆ ಚಿಂತೆ ಇಲ್ಲ. ನೀರು ಎಲ್ಲಿ ತಲುಪಬೇಕೋ ಅಲ್ಲಿಗೆ ತಲುಪುತ್ತಿದೆ’ ಎಂದು ತ್ರಿಶಾ ಹೆಸರು ಹೇಳದೇ ಮಾತನಾಡಿದ್ದರು.
ಉದಯನಿಧಿ ಸ್ಟಾಲಿನ್ ಬಂಧನ ಇಷ್ಟು ಕೀಳಮಟ್ಟದಲ್ಲಿ ಒಂದು ಹೆಣ್ಣಿನ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಅನೇಕರು ಉದಯನಿಧಿ ವಿರುದ್ಧ ಕೆಂಡ ಕಾರಿದ್ದರು. ಫ್ಯಾನ್ಸ್, ಸಾಮಾಜಿಕ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು. ಅಷ್ಟರಲ್ಲಾಗಲೇ ಉದಯನಿಧಿ ವಿರುದ್ಧ ಪ್ರಕರಣ ದಾಖಲಾಗಿ, ಮಂಗಳವಾರ ಬಂಧನಕ್ಕೊಳಗಾಗಿ ಸಂಜೆ ಬಿಡುಗಡೆ ಆದರು. ಇಷ್ಟೆಲ್ಲ ಆದರೂ ಈ ವಿಚಾರ ಅಂತ್ಯ ಕಂಡಿಲ್ಲ, ತಮಿಳುನಾಡಿನಾದ್ಯಂತ ಚರ್ಚೆಗಳು ಮುಂದುವರಿದಿವೆ.
ನಟಿ ತ್ರಿಶಾ ಪೋಸ್ಟ್ ಸಿಎಂ ಮತ್ತು ನಟ ವಿಜಯ್ ಹಾಗೂ ತ್ರಿಶಾ ಕುರಿತ ಸಾಕಷ್ಟು ವದಂತಿಗಳು, ನಟ ವಿಜಯ್ ಬರ್ತಡೇ ಗೆ ವಿಷ್ ತ್ರಿಶಾ ವಿಶ್ ಮಾಡಿಲ್ಲ ಎಂಬುದು ಸೇರಿದಂತೆ ಕೆಲವು ಬೆಳವಣಿಗೆಗಳು ನಡೆದಾಗಲೂ ಈ ಹಿಂದೆತ್ರಿಶಾ ಪ್ರತಿಕ್ರಿಯಿಸಿದ್ದರು. ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ತಮ್ಮ ಪೊಸ್ಟ್, ಸ್ಟೇಟಸ್ ಮೂಲಕ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು.ಆದರೆ ಈ ಬಾರಿ ಉದಯನಿಧಿ ಹೇಳಿಕೆ ಬೆನ್ನಲ್ಲೆ ತ್ರಿಶಾ ಅಂತಹ ಗೋಜಿಗೆ ಹೋಗಿಲ್ಲ. ಬದಲಾಗಿ ಮೌನ ವಹಿಸಿದ್ದಾರೆ. ಇದು ಇಂಟರ್‍ನೆಟ್‌ನಲ್ಲಿ ಅಭಿಮಾನಿಗಳ ಕುತೂಹಲಕ್ಕೆ, ಬೇರೆ ಬೇರೆ ಆಯಾಮಗಳಲ್ಲಿ ಚರ್ಚೆಗೂ ಕಾರಣವಾಗಿದೆ.
ತ್ರಿಶಾ ಮೌನದ ಹಿಂದಿರುವ ಕಾರಣವೇನು? ನಟಿ ತ್ರಿಶಾ ಈ ವಿಚಾರ ಬಗ್ಗೆ ಪ್ರತಿಕ್ರಿಯಿಸಲು ಸಮಯಕ್ಕಾಗಿ ಕಾಯುತ್ತಿದ್ದಾರಾ? ಅಥವಾ ಕಾನೂನು ಪ್ರಕಾರ ಮುಂದುವರಿಯಲು ಯೋಚಿಸಿದ್ದಾರಾ? ಎಂದು ಫ್ಯಾನ್ಸ್ ಮಾತನಾಡಿಕೊಳ್ಳುತ್ತಿದ್ದಾರೆ. ಇಲ್ಲವೇ ಪ್ರಸ್ತುತ ವಿವಾದವನ್ನು ನಿರ್ಲಕ್ಷಿಸಲು ಮುಂದಾಗಿದ್ದಾರೆ ಎಂಬುದು ಗೊತ್ತಿಲ್ಲದೇ ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದಾರೆ. ತ್ರಿಶಾ ಹೆಸರು ನೇರವಾಗಿ ಹೇಳದೇ ಉದಯನಿಧಿ ಮಾತನಾಡಿರುವಾಗ ತಾವು ಆ ಬಗ್ಗೆ ಹೇಳಿದರೆ ವಿವಾದಕ್ಕೆ ರೆಕ್ಕೆ ಪುಕ್ಕ ನೀಡಿದಂತಾಗುತ್ತದೆ ಎಂದು ಸುಮ್ಮನ್ನಿದ್ದಾರೆ ಎನ್ನಲಾಗಿದೆ. ವಾಡಿಕೆ ಮಾತೊಂದಿದೆ ‘ಕುಂಬಳಕಾಯಿ ಕಳ್ಳನೆಂದ್ರೆ ಹೆಗಲು ಮುಟ್ಟಿ ನೋಡಿಕೊಂಡರಂತೆ’, ಹೀಗೆ ತಮ್ಮ ಹೆಸರು ಹೇಳದೇ ನೀಡಿದ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರೆ ವಿವಾದ ಮತ್ತಷ್ಟು ಬೆಳೆಯುವ ಸಾಧ್ಯತೆ ಇದೆ. ಹೀಗಾಗಿ ತ್ರಿಶಾ ಮೌನ ವಹಿಸಿದ್ದಾರೆ ಎನ್ನಲಾಗಿದೆ.




