Published
8 hours agoon
By
Akkare News
ವಿಟ್ಲ: “ಗಿಡ ಬೆಳೆಸಿ, ಜೀವ ಉಳಿಸಿ” ಎಂಬ ಆಶಯದೊಂದಿಗೆ ನಮ್ಮ ನವಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಪುತ್ತೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಅಬ್ಬು ನವಗ್ರಾಮ ನೇತೃತ್ವದ ‘ಟೀಮ್ ನವಗ್ರಾಮ’, ವಿಟ್ಲ ಪಟ್ಟಣ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಯ ಜಂಟಿ ಆಶ್ರಯದಲ್ಲಿ ಈ ಗಿಡ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ವಿಟ್ಲ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ವಿರಣ್ಣ,ಅರಣ್ಯ ಗಸ್ತು ಪಾಲಕ ಸತೀಶ್ ಡಿಸೋಜ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನೈತೊಟ್ಟು, ಸದಸ್ಯ ವಿ. ಅಬ್ದುಲ್ ರಹಿಮಾನ್ (ಹಸೈನಾರ್ ನೆಲ್ಲಿಗುಡ್ಡೆ), ಹಿರಿಯರಾದ ಮೊಯಿದ್ದೀನ್ ಮತ್ತು ಸಮದ್ ಉಪಸ್ಥಿತರಿದ್ದು ಪರಿಸರ ಸಂರಕ್ಷಣೆಯ ಸಂದೇಶ ನೀಡಿದರು.





