Published
1 hour agoon
By
Akkare News
ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ಗ್ರಾಹಕರಿಗಾಗಿ ಮಳೆಗಾಲದ ವಿಶೇಷ ಖರೀದಿ ಉತ್ಸವ ಮುಂಗಾರು ಮೇಳವನ್ನು ಘೋಷಿಸಿದೆ. ಈ ಮೇಳವು ಜೂನ್ 13ರಿಂದ ಜೂನ್ 22ರವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತವಾಗಿದೆ.
ಮೇಳದ ಅಂಗವಾಗಿ ಚಿನ್ನದ ಸರಗಳ ತಯಾರಿಕೆ ಶುಲ್ಕ ಕೇವಲ 8%ರಿಂದ, ಹಾಗೂ ಆಂಟಿಕ್ ಆಭರಣಗಳ ತಯಾರಿಕೆ ಶುಲ್ಕ 12%ರಿಂದ ಆರಂಭವಾಗುತ್ತದೆ. ಜೊತೆಗೆ EF & VVS ಗುಣಮಟ್ಟದ ವಜ್ರಾಭರಣಗಳು ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿದ್ದು, ಇತರೆ ಆಯ್ದ ಆಭರಣಗಳ ಖರೀದಿಯ ಮೇಲೂ ಆಕರ್ಷಕ ರಿಯಾಯಿತಿಗಳನ್ನು ಪಡೆಯಬಹುದು.
ಸಂಸ್ಥೆಯು ತನ್ನ ಸುದೀರ್ಘ ವರ್ಷಗಳ ವಿಶ್ವಾಸ, ಶುದ್ಧತೆ ಹಾಗೂ ಉತ್ತಮ ಸೇವೆಯ ಮೂಲಕ ಗ್ರಾಹಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಪುತ್ತೂರು ಸೇರಿದಂತೆ ಸುಳ್ಯ,ಹಾಸನ, ಕುಶಾಲನಗರ ಹಾಗೂ ಮೂಡಬಿದ್ರೆ ಶಾಖೆಗಳಲ್ಲಿಯೂ ಮುಂಗಾರು ಮೇಳ ನಡೆಯಲಿದ್ದು, ಗ್ರಾಹಕರು ಈ ವಿಶೇಷ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆ ಮನವಿ ಮಾಡಿದೆ. ಮಳೆಗಾಲದ ಸಂಭ್ರಮವನ್ನು ಆಭರಣ ಖರೀದಿಯೊಂದಿಗೆ ಇನ್ನಷ್ಟು ವಿಶೇಷವಾಗಿಸಿಕೊಳ್ಳಲು, ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಭೇಟಿ ನೀಡಿ ಆಕರ್ಷಕ ಕೊಡುಗೆಗಳು ಹಾಗೂ ರಿಯಾಯಿತಿಗಳ ಪ್ರಯೋಜನ ಪಡೆಯುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಮುಂಗಾರು ಮೇಳ – ಉಳಿತಾಯದ ಮಳೆ, ಸಂಭ್ರಮದ ಖರೀದಿ. 




