Published
6 hours agoon
By
Akkare News
ಪುತ್ತೂರು, ಜೂನ್ 19: ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಆಯೋಜಿಸಲಾದ ‘ಮುಂಗಾರು ಮೇಳ’ಕ್ಕೆ ಇನ್ನೂ ಕೇವಲ ಮೂರು ದಿನಗಳು ಮಾತ್ರ ಬಾಕಿಯಿದ್ದು, ಗ್ರಾಹಕರು ಈ ವಿಶೇಷ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯ ಮುಖ್ಯಸ್ಥರಾದ ಬಲರಾಮಾ ಆಚಾರ್ಯರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚಿನ್ನದ ದರವು ಸುಮಾರು ₹15,000ರಿಂದ ₹13,300 ರ ಮಟ್ಟಕ್ಕೆ ಇಳಿಕೆಯಾಗಿರುವುದು ಆಭರಣ ಖರೀದಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಿದೆ. ಇದರೊಂದಿಗೆ ಮುಂಗಾರು ಮೇಳದ ವಿಶೇಷ ಕೊಡುಗೆಗಳು ಗ್ರಾಹಕರಿಗೆ ಹೆಚ್ಚಿನ ಉಳಿತಾಯದ ಅವಕಾಶವನ್ನು ಒದಗಿಸುತ್ತಿವೆ. 
ಮುಂಗಾರು ಮೇಳದ ಅಂಗವಾಗಿ ಆಯ್ದ ಸರಗಳ ತಯಾರಿಕೆ ಶುಲ್ಕದಲ್ಲಿ 8%ರಿಂದ ಹಾಗೂ ಆಯ್ದ ಆಂಟಿಕ್ ಆಭರಣಗಳ ತಯಾರಿಕೆ ಶುಲ್ಕದಲ್ಲಿ 12%ರಿಂದ ಆರಂಭವಾಗುವ ವಿಶೇಷ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಜೊತೆಗೆ EF-VVS ಗುಣಮಟ್ಟದ ವಜ್ರಾಭರಣಗಳು ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು,ಹಳೆಯ ಚಿನ್ನದ ವಿನಿಮಯಕ್ಕೆ ಚಿನ್ನದ ದರದಲ್ಲಿ 0% ಕಡಿತ ಹಾಗೂ 916 ಹಾಲ್ಮಾರ್ಕ್ ಆಭರಣಗಳ ವಿಶಾಲ ಸಂಗ್ರಹ ಗ್ರಾಹಕರನ್ನು ಆಕರ್ಷಿಸುತ್ತಿವೆ.





