Connect with us

ಶಾಲಾ ಚಟುವಟಿಕೆ

ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

Published

on

ಪುತ್ತೂರು: ಆ.15.ನರಿಮೊಗರು ಗ್ರಾಮದ ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ ಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾಧ್ಯಕ್ಷರಾದ ಶ್ರೀಯುತ ಜಯರಾಮ ಕೆದಿಲಾಯ ಶಿಬರರವರು ದ್ವಜಾರೋಹಣಗೈದರು. ಈ ಸಂದರ್ಭದಲ್ಲಿ ಶಾಲಾಧ್ಯಕ್ಷರಾದ ಶ್ರೀಯುತ ಜಯರಾಮ ಕೆದಿಲಾಯ ಶಿಬರ, ಮುಖ್ಯ ಅಥಿತಿಗಳಾದ ಬಿ ವಿ ಶಗ್ರೀತ್ತಾಯರು ರಾಷ್ಟ್ರಪ್ರಶಸ್ತಿ ಪುರಸ್ಕೃತರು, ನಿವೃತ್ತ ಮುಖ್ಯೋಪಾಧ್ಯಾಯರು ವಿದ್ಯಾಬೋದಿನಿ ಪ್ರೌಢಶಾಲೆ ಬಾಳಿಲ, ಗೌರವ ಅತಿಥಿಗಳಾದ ಹವಿಲ್ದಾರ್ ಲಕ್ಶ್ಮೀಶ ಕೆ ನಿವೃತ್ತ ಸೈನಿಕರು, ಪೋಷಕರು, ಕಾರ್ಯದರ್ಶಿಗಳಾದ ಶ್ರೀ ಕೃಷ್ಣಪ್ರಸಾದ್ ಕೆದಿಲಾಯ , ಕೋಶಾಧಿಕಾರಿಗಳಾದ ಶ್ರೀ ಹರೀಶ್ ಪುತ್ತೂರಾಯ, ಜೊತೆ ಕಾರ್ಯದರ್ಶಿ ಶ್ರೀ ಸುಬ್ರಾಯ ಬಿ ಎಸ್ ಆಡಳಿತ ಮಂಡಳಿ ಸದಸ್ಯರಾದ ಶ್ರೀ ವೆಂಕಟಕೃಷ್ಣ ಕೆ ಕೆ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸುರೇಶ್ ಪ್ರಭು, ಮುಖ್ಯೋಪಾಧ್ಯಾಯರಾದ ಶ್ರೀ ಪ್ರಸನ್ನ ಕೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಾದ ಹವಿಲ್ದಾರ್ ಲಕ್ಶ್ಮೀಶ ಕೆ ರವರನ್ನು ಸನ್ಮಾನಿಸಲಾಯಿತು ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಹವಿಲ್ದಾರ್ ಲಕ್ಷ್ಮೀಶ.ಕೆ ರವರು ಈ ದಿನ ಶುಭ ಸಮಾರಂಭ 79 ವರ್ಷ ಕಳೆದು 80ನೇ ಸ್ವಾತಂತ್ರ್ಯ ದಿನವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ವೀರರಿಗೆ ನಮಿಸುತ್ತಾ ಇಷ್ಟೊಂದು ವಿಜೃಂಭಣೆಯಿಂದ ಆಚರಿಸಲು ನಮ್ಮ ವೀರರು ಬಲಿದಾನ ಅರ್ಪಿಸಿದ ಫಲವಾಗಿದೆ. ಅವರು ಇಂದಿಗೂ ನಮ್ಮ ಮನದಲ್ಲಿ ಜೀವಂತವಾಗಿದ್ದಾರೆ. ಬಲಿದಾನ ಮಾಡಿದ ವೀರರಿಗೆ ಏನೂ ಮಾಡಲು ಸಾಧ್ಯವಿಲ್ಲ. ಆದರೆ ಅವರನ್ನು ಸದಾ ಸ್ಮರಿಸುವುದು ಮುಖ್ಯ ಎಂದರು. ಮುಖ್ಯ ಅಥಿತಿಗಳಾದ ಬಿ ವಿ ಶಗ್ರೀತ್ತಾಯರು ವಿದ್ಯಾರ್ಥಿಗಳನ್ನು ನೋಡಿ ತುಂಬಾ ಸಂತೋಷವಾಗಿದೆ. ಈ ಶಾಲೆ ಎಲ್ಲಾ ರೀತಿಯಲ್ಲೂ ಸರ್ವಾoಗೀಣ ಅಭಿವೃದ್ಧಿ ಮಾಡುವಂತಹ ಸಂಸ್ಥೆಯಾಗಿದೆ. ಸ್ವಾತಂತ್ರ್ಯ ಕ್ಕೋಸ್ಕರ ಹೋರಾಡಿದ ಎಲ್ಲಾ ವೀರರನ್ನು ನಾವು ಸ್ಮರಿಸಬೇಕು ಈ ವೀರರ ಜೀವನ ಚರಿತ್ರೆಯನ್ನು ಓದಿ ಅವರ ನೀತಿಯನ್ನು ಜೀವನದಲ್ಲಿ ಅಳವಡಿಸಬೇಕು ಎಂದರು. ಕೋಶಾಧಿಕಾರಿಗಳಾದ ಹರೀಶ್ ಪುತ್ತೂರಾಯರು ಮಾತನಾಡುತ್ತಾ 80ವರ್ಷದ ಹಿಂದೆ ನಮಗೆ ಸ್ವತ್ರoತ್ರ್ಯ ಇತ್ತೇ ಎಂಬ ಪ್ರಶ್ನೆಗೆ ಉತ್ತರವಾಗಿ ಭಾರತಕ್ಕೆ 5ಸಾವಿರಕ್ಕಿಂತ ಹೆಚ್ಚಿನ ವರ್ಷದ ಇತಿಹಾಸವಿದೆ. ನಮ್ಮ ಭಾರತದ ಸಾಂಸ್ಕೃತಿಕ ಅಡಿಕಟ್ಟಿನಿಂದ ನಮ್ಮ ಇತಿಹಾಸ ತಿಳಿಯಬೇಕಾಗಿದೆ. ಭಾರತದ ಇತಿಹಾಸ ತಿಳಿದರೆ ಸ್ವಾತಂತ್ರ್ಯ ದ ಪರಿಚಯ ತಿಳಿಯುತ್ತದೆ. ಸಾಮಾಜಿಕ ಮತ್ತು ಸಂಸ್ಕೃತಿಯನ್ನು ವಿದ್ಯಾರ್ಥಿಗಳಲ್ಲಿ ಭದ್ರ ಪಡಿಸುವವರು ಶಿಕ್ಷಕರು ಶಿಕ್ಷಕರೂ ಕೂಡ ದೇಶದ ಸೈನಿಕರೇ ಎಂದರೆ ತಪ್ಪಾಗಲಾರದು. ಅಂತಹ ಶಿಕ್ಷಕ ಹಾಗೂ ದೇಶದ ಸೈನಿಕರಲ್ಲಿ ಒಬ್ಬರು ನಮ್ಮ ಜೊತೆಗಿದ್ದಾರೆ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಬೌಗೋಳಿಕ ರಕ್ಷಣೆ ಮಾಡುವಂತಹ ಗಣ್ಯರನ್ನು ಇಂದು ಗೌರವಿಸಿದ್ದು ನಮಗೆ ಖುಷಿ ತಂದಿದೆ ಎಂದು ಸ್ವಾತಂತ್ರ್ಯ ದಿವಸದ ಶುಭಾಶಯ ತಿಳಿಸಿದರು. ಆಡಳಿತಮಂಡಳಿ ಸದಸ್ಯರಾದ ವೆಂಕಟ ಕೃಷ್ಣ ಕೆ ಕೆ ರವರು ಮಾತನಾಡುತ್ತಾ ಸ್ವಾತಂತ್ರ್ಯ ದಿನದಂದು ದೇಶದ ಅಹಿಂಸಾ ಮಾರ್ಗವನ್ನು ಬೋಧಿಸಿದಂತಹ ಮಹಾತ್ಮಾ ಗಾಂಧಿ ಯವರನ್ನು ಹಾಗೆಯೇ ಭಾರತದ ವಿಭಜನೆಯ ದುರಂತ ದ ಸಮಯದಲ್ಲಿ ದೇಶದ ಅಭಿವೃದ್ಧಿಯ ಯೋಜನೆಯನ್ನು ಮಾಡಿದಂತಹ ಜವಾಹರ್ಲಾಲ್ ನೆಹರು ಹಾಗೂ ದೇಶದ ಪ್ರಗತಿಯ ಸಾಧನೆ ಮಾಡಲು ಪ್ರಯತ್ನ ಪಟ್ಟಂತಹ ಸರ್ದಾರ್ ವಲ್ಲಭಬಾಯಿ ಪಟೇಲರು, ಸಂವಿಧಾನ ರೂಪಿಸಿದಂತಹ ಅಂಬೇಡ್ಕರ್ ರವರ ಹೆಸರನ್ನು ನೆನಪಿಸಬೇಕು. ದೇಶವನ್ನು ಬೆಳೆಸುವಲ್ಲಿ ಎಲ್ಲರು ಒಂದಾಗಿ ಕೆಲಸ ಮಾಡಬೇಕು ಎಂದರು.

ನಂತರ ಶಾಲಾಧ್ಯಕ್ಷರಾದ ಜಯರಾಮ ಕೆದಿಲಾಯ ಶಿಬರ ರವರು ಮುಖ್ಯ ಅತಿಥಿಗಳಾದ ಬಿ ವಿ ಶಗ್ರೀತ್ತಾಯರನ್ನು ಗೌರವಿಸಿದರು ತದನಂತರ ಮಾತನಾಡಿದ ಶಾಲಾಧ್ಯಕ್ಷರು ಭಾರತದಂತಹ ಚರಿತೆಯನ್ನು ನೆನಪಿಸುಕೊಳ್ಳುವ ದಿನ. ಬ್ರಿಟಿಷರ ಆಡಳಿತದ ಸಮಯದಲ್ಲಿ ಅತೀ ಹೆಚ್ಚಿನ ತೆರಿಗೆಯನ್ನು ವಿಧಿಸಿ ಆಹಾರಧಾನ್ಯಗಳ ಕೊರತೆಯನ್ನು ಮಾಡಿದಾಗ ಸ್ವತಂತ್ರ್ಯ ಅನಿವಾರ್ಯವಾಯಿತು. ಮಹಾನ್ ವ್ಯಕ್ತಿಗಳ ಸಾಧನೆಯನ್ನು ನೆನಪಿಸಿಕೊಳ್ಳಲೇ ಬೇಕು. ವಿದ್ಯಾರ್ಥಿಗಳು ದೇಶವನ್ನು ಕಟ್ಟಿದ ವೀರರ ವಿಷಯವನ್ನು ತಿಳಿದು ನಮ್ಮ ವಿದ್ಯಾರ್ಥಿಗಳು ಬೆಳೆಯಬೇಕು ಎಂದು ಸ್ಫೂರ್ತಿದಾಯಕ ಮಾತುಗಳನ್ನಾಡಿದರು.

 
ಸಹ ಶಿಕ್ಷಕಿಯಾದ ಮಹಾಲಕ್ಷ್ಮಿ ಹಾಗೂ ವಿದ್ಯಾರ್ಥಿಗಳಾದ ಆರೋಹಿ ಮತ್ತು ಧ್ಯಾನ್ ರೈ ರವರು ಸ್ವಾತಂತ್ರ್ಯಹೋರಾಟಗಾರರ ಬಗ್ಗೆ ಮಾತನಾಡಿದರು. ನಂತರ ವಿದ್ಯಾರ್ಥಿಗಳಿಂದ ದೇಶದ ಸ್ವಾತಂತ್ರ್ಯಹೋರಾಟದ ನೆನಪುಗಳನ್ನು ಮೆಲುಕು ಹಾಕುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
 
ಶಾಲಾ ಕಾರ್ಯದರ್ಶಿಗಳಾದ ಕೃಷ್ಣ ಪ್ರಸಾದ್ ಕೆದಿಲಾಯರು ಎಲ್ಲರನ್ನು ಆದರದಿಂದ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಮೌಲ್ಯ ಅಹಲ್ಯ ಬನಾರಿ, ಸಾಯಿವಜ್ರ ಪ್ರಾರ್ಥಿಸಿದರು. ಶಿಕ್ಷಕಿಯರಾದ ಗೀತಾಕುಮಾರಿ ಎಚ್ ಎಸ್ ರವರು ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯರಾದ ಪ್ರಸನ್ನ ಕೆ ರವರು ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ವಿದ್ಯಾರ್ಥಿ ವೃಂದ, ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಗೆ ಸಿಹಿ ಹಂಚಲಾಯಿತು.

Continue Reading
Click to comment

Leave a Reply

Your email address will not be published. Required fields are marked *

Advertisement