Published
1 hour agoon
By
Akkare News

ಶಾಸಕರ ಕಚೇರಿಯಲ್ಲಿ ಅ.22ರಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ವರ್ಷದ ಅಶೋಕ ಜನ-ಮನಕ್ಕೆ ನ.8ರಂದು ನಡೆಸುವುದಾಗಿ ಎಲ್ಲಾ ಸಿದ್ದತೆ ನಡೆಸಲಾಗಿತ್ತು. ಇದಕ್ಕಾಗಿ ಕ್ರೀಡಾಂಗಣದಲ್ಲಿ ಮಣ್ಣ ಹಾಕಿ ಸಮತಟ್ಟು ಮಾಡಲಾಗಿತ್ತು. ಹವಾಮಾನ ವೈಪರೀತ್ಯಗಳಿಂದ ಕಳೆದ ಕೆಲ ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಮಳೆಯಿಂದ ಜನರಿಗೆ ತೊಂದರೆ ಆಗದಂತೆ ವ್ಯವಸ್ಥಿತ ರೀತಿಯಲ್ಲಿ ನಡೆಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದ್ದು ನ.22ರ ತುಳಸಿ ಹಬ್ಬದ ದಿನ ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕರು ತಿಳಿಸಿದರು.
ಬೆಳಿಗ್ಗೆ 9.30ರಿಂದ ವಸ್ತ್ರ ವಿತರಣೆ ಪ್ರಾರಂಭ: ಕಾರ್ಯಕ್ರಮದಲ್ಲಿ ಯಾವುದೇ ಅತಿಥಿಗಳು ಆಗಮಿಸುವ ತನಕ ಕಾಯುವುದಿಲ್ಲ. ಬೆಳಿಗ್ಗೆ 9.30ರಿಂದಲೇ ವಸ್ತ್ರ ವಿತರಣೆ ಪ್ರಾರಂಭಗೊಳ್ಳಲಿದೆ. ಯಾವುದೇ ಗೊಂದಲ ಇಲ್ಲದೆ ವಿತರಣೆ ಮಾಡಲಾಗುವುದು. ಪುತ್ತೂರು ವಿಧಾನ ಸಭಾ ಕ್ಷೇತ್ರ ಮಾತ್ರವಲ್ಲದೇ ಯಾವುದೇ ಭಾಗಗಳಿಂದ ಬಂದವರಿಗೂ ವಿತರಿಸಲಾಗುವುದು. ಜನರಿಗೆ ಯಾವುದೇ ಗುರುತಿನ ಚೀಟಿಗಳ ಆವಶ್ಯಕತೆಯಿಲ್ಲ. ಬರುವ ಪ್ರತಿಯೊಬ್ಬರಿಗೂ ವಿತರಿಸಲಾಗುವುದು.
ಒಂದು ಲಕ್ಷ ಜನರಿಗೆ ವಿತರಣೆ: ಈ ವರ್ಷ ಒಂದು ಲಕ್ಷ ಜನರಿಗೆ ವಸ್ತ್ರ ವಿತರಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಒಂದು ಮನೆಯಿಂದ ಎಷ್ಟೇ ಜನ ಬಂದರೂ ಅವರಿಗೆ ನೀಡಲಾಗುವುದು. ಮಹಿಳೆಯರಿಗೆ ಸೀರೆ, ಪುರುಷರಿಗೆ ಬೆಡ್ ಶೀಟ್, ಬಟ್ಟಲು, ಗ್ಲಾಸ್, ಬೌಲ್ ಹಾಗೂ ಟವೆಲ್ ಸೆಟ್ಗಳನ್ನು ನೀಡಲಾಗುತ್ತಿದೆ. ಪ್ರತ್ಯೇಕ ಮೂರು ಕೌಂಟರ್ಗಳಲ್ಲಿ ವಿತರಿಸಲಾಗುತಿದ್ದು ಪ್ರತಿ ಮನೆಯವರು ಅವರಿಗೆ ಆವಶ್ಯಕವಾದ ವಸ್ತುಗಳನ್ನು ಪಡೆದುಕೊಳ್ಳಬಹುದು. ಒಂದು ವರ್ಷದ ಮಗುವಿನಿಂದ ಪ್ರಾರಂಭಿಸಿ ವಯಸ್ಸಾದವರ ತನಕ ನೀಡಲಾಗುವುದು. ತಾಯಿ ಮಗು ಹಾಗೂ ವಯಸ್ಸಾದವರಿಗೆ ಪ್ರತ್ಯೇಕವಾಗಿ ವಿತರಣೆಗೆ ವ್ಯವಸ್ಥೆಗಳನ್ನು ಮಾಡಲಾಗುವುದು.
ಬೆಳಿಗ್ಗೆಯಿಂದಲೇ ದೋಸೆ ವಿತರಣೆ: ಕಾರ್ಯಕ್ರಮದಲ್ಲಿ ಬೆಳಿಗ್ಗೆ 9.30ರಿಂದಲೇ ದೋಸೆ ವಿತರಣೆ ಪ್ರಾರಂಭಗೊಳ್ಳಲಿದೆ. ಒಂದು ಲಕ್ಷ ದೋಸೆ ವಿತರಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ 11.30ರ ತನಕ ದೋಸೆ ವಿತರಣೆ ನಡೆದು ಆನಂತರ ಮಧ್ಯಾಹ್ನದ ಊಟ ಪ್ರಾರಂಭಗೊಳ್ಳಲಿದೆ. ಅಪರಾಹ್ನ 3 ಗಂಟೆಯ ತನಕ ಊಟ ನಡೆದು ನಂತರ ಮತ್ತೆ ದೋಸೆ ವಿತರಿಸಲಾಗುವುದು. ಟ್ರಸ್ಟ್ ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಪೂಡಾ ಸದಸ್ಯ ನಿಹಾಲ್ ಶೆಟ್ಟಿ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಜಯಪ್ರಕಾಶ್ ಬದಿನಾರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.






