Connect with us

ಸ್ಥಳೀಯ

ಬೆಂಗಳೂರು: 7ಜನರ ಹತ್ಯೆ ಪ್ರಕರಣ: ಐವರ ಮೃತದೇಹ ಪತ್ತೆ

Published

on

ಬೆಂಗಳೂರು ನ.8: ಒಂದೇ ಕುಟುಂಬದ ಏಳು ಜನರ ಬರ್ಬರ ಹತ್ಯೆ ಪ್ರಕರಣಕ್ಕೆ ಕುರಿತಂತೆ ರಾಜಾಜಿನಗರದ ಪೊಲೀಸರು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಎರಡು ಮೃತದೇಹಗಳನ್ನು ಪತ್ತೆ ಹಚ್ಚಿದ್ದು, ಇವು ಶಿವಕುಮಾರ್‌ ಮತ್ತು ದಿವ್ಯಾ ದಂಪತಿಯದ್ದು ಎನ್ನಲಾಗಿದೆ.

ಆರೋಪಿ ಇಂದುಶೇಖರ್‌ನನ್ನು ಕರೆದುಕೊಂಡು ಹೋಗಿ ಶವ ಪತ್ತೆ ಮಾಡಲಾಗಿದ್ದು, ಕುಟುಂಬದವರ ಸಮ್ಮುಖದಲ್ಲಿ ಮೃತದೇಹ ತೆಗೆಯುವ ಕೆಲಸ ನಡೆದಿದೆ. ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರಿಗೆ ಪೊಲೀಸರು ಮೃತದೇಹವನ್ನು ಹಸ್ತಾಂತರ ಮಾಡಲಿದ್ದಾರೆ. ಇಲ್ಲಿಯವರೆಗೆ ಐವರ ಮೃತದೇಹಗಳು ಸಿಕ್ಕಂತಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟಟದ ತಪ್ಪಲಿನಲ್ಲಿ 7 ವರ್ಷದ ಬಾಲಕ ಪುನೀತ್‌ ಮೃತದೇಹ ದೊರಕಿದ್ದು, ಕುಟುಂಬದವರು ಅಂತ್ಯಸಂಸ್ಕಾರ ಮಾಡಿದ್ದರು. ನಂತರ ಸೇಲಂನಲ್ಲಿ ಸುನೀತಾ, ರೂಪವತಿ ಮೃತದೇಹ ದೊರಕಿದೆ. ಇದೀಗ ಮತ್ತಿಬ್ಬರ ಶವಗಳು ದೊರಕಿರುವ ಕಾರಣ ನಾಲ್ಕು ಮೃತದೇಗಳನ್ನು ಒಂದೇ ಕಡೆ ಅಂತ್ಯಕ್ರಿಯೆ ಮಾಡಲು ಕುಟುಂಬದವರು ಸಿದ್ಧತೆ ಮಾಡಿದ್ದಾರೆ.

ಇನ್ನುಳಿದ ಶಂಕರ್‌, ನಳಿನಿ ಶವಗಳು ಸಿಗಬೇಕಿದೆ. ಅವುಗಳ ಶೋಧ ನಡೆಯುತ್ತಿದೆ. ಆರೋಪಿ ನೀಡಿರುವ ಮಾಹಿತಿಯ ಅನುಸಾರ ಶಿರಾಡಿ ಘಾಟ್‌ನಲ್ಲಿ ಬಿಸಾಡಲಾಗಿದೆ. ಶವ ಬಿಸಾಡಿರುವ ಜಾಗದಲ್ಲಿ ಪೊಲೀಸರ ಹುಡುಕಾಟ ನಡೆಯುತ್ತಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement