Published
7 months agoon
By
Akkare News
ಪುತ್ತೂರು: ಭಾರತೀಯ ಜನತಾ ಪಾರ್ಟಿ,ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ಪುತ್ತೂರು ನಗರ ಮತ್ತು ಗ್ರಾಮಾಂತರ ಮಂಡಲಗಳ ಮಾಸಿಕ ಸಭೆ ಹಾಗೂ ರಕ್ಷಾಬಂಧನ ಉತ್ಸವವು ಆಗಸ್ಟ್ 11 ರಂದು ಪಕ್ಷದ ಕಚೇರಿಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಯುವ ಮೋರ್ಚಾ ನಗರ ಮಂಡಲದ ಅಧ್ಯಕ್ಷರಾದ ನಿತೇಶ್ ಕಲ್ಲೇಗ ಮತ್ತು ಯುವ ಮೋರ್ಚಾ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಶಿಶಿರ್ ಪೆರ್ವೋಡಿ ಮತ್ತು ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮಚ್ಚಿಮಲೆ ವಿರೂಪಾಕ್ಷ ಭಟ್ ಹಾಗೂ ಪುತ್ತೂರು ನಗರ ಮಂಡಲ ಉಪಾಧ್ಯಕ್ಷರಾದ ಯುವರಾಜ್ ಪೆರಿಯತ್ತೋಡಿ,ಗ್ರಾಮಾಂತರ ಮಂಡಲದ ಕಾರ್ಯದರ್ಶಿ ರತನ್ ರೈ ಕುಂಬ್ರ ಮತ್ತು ಯುವ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತಿ ಇದ್ದರು.ಕಾರ್ಯಕ್ರಮವನ್ನು ಪವನ್ ಶೆಟ್ಟಿ ಸ್ವಾಗತಿಸಿ ಆದೇಶ್ ಶೆಟ್ಟಿ ವಂದಿಸಿದರು.














