Published
5 months agoon
By
Akkare News
ಬೆಂಗಳೂರು : ಶ್ರೀ ಕಿಶೋರ್ ಕುಮಾರ್ ಕೆ. ಅವರು ಪುತ್ತೂರು ತಾಲೂಕು ಕೆಮ್ಮಿಂಜೆ ಗ್ರಾಮದ ಕೊರುಂಗು ಮನೆಯಲ್ಲಿ ದಿ! ಅಣ್ಣಿ ಪೂಜಾರಿ ಹಾಗೂ ದಿ! ಗಿರಿಜಾ ಪೂಜಾರಿ ದಂಪತಿಗಳ ಚತುರ್ಥ ಮಗನಾಗಿ ಜನಿಸಿದರು. ಒಬ್ಬರು ಅಣ್ಣ , ಇಬ್ಬರು ಅಕ್ಕಂದಿರು ಹಾಗೂ ಒಬ್ಬ ತಮ್ಮ ಇಬ್ಬರು ತಂಗಿ ಇರುವ ತುಂಬು ಸಂಸಾರ ಇವರದು.


ವಿದ್ಯಾಭ್ಯಾಸ ಮತ್ತು ವೃತ್ತಿ ಜೀವನ
ಪ್ರಾಥಮಿಕ ವಿದ್ಯಾಭ್ಯಾಸ ಹಾಗೂ ಪದವಿಯನ್ನು ತನ್ನ ಹುಟ್ಟೂರು ಪುತ್ತೂರಲ್ಲೇ ಮುಗಿಸಿ ಬೆಂಗಳೂರಿನ ಶಿವ ಶಕ್ತಿ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ವ್ಯವಸ್ಥಾಪಕರಾಗಿ ಸುಮಾರು 26 ವರ್ಷದಿಂದ ಒಂದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಯುವವಾಹಿನಿಯ ಭಾಂದವ್ಯ 2018ರಲ್ಲಿ ಯುವವಾಹಿನಿ (ರಿ.) ಬೆಂಗಳೂರು ಘಟಕಕ್ಕೆ ಸೇರಿದ ಕಿಶೋರ್ ಕುಮಾರ್ ಕೆ ಅವರು ಸಂಘಟನ ಕಾರ್ಯದರ್ಶಿ ಸಮಾಜ ಸೇವೆ ನಿರ್ದೇಶಕರಾಗಿ, ಜೊತೆ ಕಾರ್ಯದರ್ಶಿ ಯಾಗಿ, *ಕ್ರೀಡಾ ನಿರ್ದೇಶಕರಾಗಿ ಪ್ರಸ್ತುತ ಅವಧಿಯಲ್ಲಿ ಎರಡನೇ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 
ಸದಾ ಹಸನ್ಮುಖಿ ಆಗಿರುವ ಶ್ರೀಯುತರು 2009ರಲ್ಲಿ ನಮಿತಾ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಹೃದ್ವಿಕ್ ಮತ್ತು ಹೃಷಿಕ್ ಎಂಬ ಎರಡು ಗಂಡುಮಕ್ಕಳೊಂದಿಂಗೆ ಬೆಂಗಳೂರಿನಲ್ಲಿ ಸುಂದರ ಜೀವನ ನಡೆಸುತ್ತಿದ್ದಾರೆ. 


