ಉಪ್ಪಿನಂಗಡಿ :ತುಳುನಾಡಿನ ಅಪ್ರತಿಮ ಕ್ರಾಂತಿವೀರ ಸ್ವಾತಂತ್ರ್ಯ ಹೋರಾಟಗಾರ, ತನ್ನ ಹೋರಾಟದಲ್ಲಿ ಬ್ರಿಟಿಷರಿಗೆ ಸಡ್ಡು ಹೊಡೆದು ಅವರ ದಾಸ್ಯದಿಂದ ನಮ್ಮ ಜನರನ್ನು ಮುಕ್ತಗೊಳಿಸಲು ಹೋರಾಡಿ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ 1837ಇಸವಿಯ ಮೇ 27ರಂದು ಗಲ್ಲಿಗೇರಿಸಲ್ಪಟ್ಟು ವೀರ ಮರಣವನ್ನಪ್ಪಿದ ಮಂಜಬೈದ್ಯರ ಸಂಸ್ಮರಣಾ ಕಾರ್ಯಕ್ರಮ ಇದೇ ಬರುವ ಮೇ 27ನನೇ ಬುಧವಾರ , ಬೆಳಿಗ್ಗೆ 10.00ಗಂಟೆಗೆ, ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ನೇತ್ರಾವತಿ ಸಭಾಂಗಣದಲ್ಲಿ ನೆರವೇರಲಿದೆ. ದೇಶಭಕ್ತ ನಾಗರಿಕರಾದ ನಾವೆಲ್ಲಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾರತದ ಸ್ವಾತಂತ್ರ್ಯಕ್ಕಾಗಿ ಅಮರರಾದ ಮಂಜ ಬೈದ್ಯರಿಗೆ ಈ ಮೂಲಕ ಗೌರವ ಸಲ್ಲಿಸೋಣ ಎಂಬುದಾಗಿ ವಿನಂತಿಲಾಗಿದೆ. ಕ್ರಾಂತಿವೀರ, ಸ್ವಾತಂತ್ರ್ಯಹೋರಾಟಗಾರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಉಪ್ಪಿನಂಗಡಿ