Connect with us

ಇತರ

ಕೊಂಬೆಟ್ಟು ಶಾಲಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ಭಾಸ್ಕರ ರಾವ್ ಎಸ್. ಆಯ್ಕೆ

Published

on

ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು ಇದರ ಪ್ರೌಢಶಾಲಾ ವಿಭಾಗದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ಭಾಸ್ಕರ ರಾವ್ ಎಸ್. ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷರಾಗಿದ್ದ ಸುರೇಶ್ ರೈ ಪಡ್ಡಂಬೈಲು ಇವರಿಂದ ತೆರವಾಗಿದ್ದ ಸ್ಥಾನಕ್ಕೆ ಭಾಸ್ಕರ ರಾವ್ ಇವರನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದೆ.

ಮೂಲತಃ ಬಂಟ್ವಾಳ ತಾಲೂಕಿನ ಕುಕ್ಕಾಜೆ ಮಂಚಿಸುಳ್ಯದವರಾಗಿರುವ ಇವರು ಬಿ.ಎಸ್ಸಿ.ಪದವೀಧರರಾಗಿದ್ದಾರೆ. ವೃತ್ತಿಯಲ್ಲಿ ತೆರಿಗೆ ಸಲಹೆಗಾರರಾಗಿದ್ದು ಪ್ರಸ್ತುತ ಪುತ್ತೂರಿನ ಕೆಮ್ಮಾಯಿಯಲ್ಲಿ ವಾಸ್ತವ್ಯ ಹೊಂದಿದ್ದಾರೆ. ಉಳಿದಂತೆ ಧರ್ಣಪ್ಪ ನಾಯ್ಕ್, ತನುಜಾ, ವಿನೋದಿನಿ, ವಂದನಾ, ಪ್ರಾಣೇಶ್, ಸುಚರಿತಾ, ಅನಿಲ್ ಜಿ.ಪಾಯಸ್ ಹಾಗೂ ರಮೇಶ್ ಇವರುಗಳು ಶಾಲಾಭಿವೃದ್ಧಿ ಸಮಿತಿಯ ಪೋಷಕ ಪ್ರತಿನಿಧಿ ಸದಸ್ಯರುಗಳಾಗಿದ್ದು ಪ್ರಭಾರ ಉಪಪ್ರಾಂಶುಪಾಲರಾದ ನಾಗರಾಜ್ ಭಟ್, ಬಾಲಕೃಷ್ಣ ಗೌಡ ಬಿ.ಟಿ., ಜಯಪ್ರಕಾಶ್, ಲೋಕೇಶ್ ಗೌಡ, ಮಮತಾ ರೈ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಶಾಲಾಭಿವೃದ್ಧಿ ಸಮಿತಿಯ ಇತರೆ ಸದಸ್ಯರುಗಳಾಗಿರುತ್ತಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement