Published
2 hours agoon
By
Akkare News
ಹಾಸನ : ಮೇ 21 ರಂದು, ಇಸ್ವತ್ತು ನೀಡಲು ಲಂಚ ಬೇಡಿಕೆ ಇಟ್ಟಿದ್ದ ಬಿಲ್ ಕಲೆಕ್ಟರ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಆಗಿರುವ ಹರೀಶ್, ಸೋಮಶೇಖರ್ ಎಂಬುವವರಿಂದ ಇಸ್ವತ್ತು ನೀಡುವ ಸಂಬಂಧ ₹48 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.





