Published
14 hours agoon
By
Akkare News
ಪುತ್ತೂರು: ಪುತ್ತೂರು ಹೃದಯ ಭಾಗದಲ್ಲಿರುವ, ಈ ರಸ್ತೆಯಲ್ಲಿ ಬೆಳಕಿನ ಸೌಲಭ್ಯ ಕಲ್ಪಿಸುವ ವಿಚಾರಕ್ಕೆ ಯಾರೂ ಸ್ಪಂದಿಸದೆ ಇರುವುದರಿಂದ,ಈ ರಸ್ತೆಯಲ್ಲಿ ಸಂಚರಿಸುವ ಪಾದಾಚಾರಿಗಳು/ ಸಾರ್ವಜನಿಕರು ಹಲವು ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ದ್ವಿಮುಖ ರಸ್ತೆಯ ಕಾರ್ಯ ಭಾಗಶ ಪೂರ್ತಿಯಾದರೂ, ಉಳಿದ ರಸ್ತೆ ಪೂರ್ತಿಗೆ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಪಟ್ಟ ಅಧಿಕಾರಿಗಳು ಮುಂದೆ ಬಾರದೆ ಇರುವುದರಿಂದ, ತಿರುವಿನಿಂದ ಕೂಡಿರುವ ಈ ರಸ್ತೆಯಲ್ಲಿ, ಅಪಘಾತಗಳು ನಿರಂತರವಾಗಿ ನಡೆಯುತ್ತಿದೆ. ಹಾರಾಡಿ ರೈಲ್ವೆ ಸೇತುವೆ ಬಳಿ ರಸ್ತೆ ಕಾಮಗಾರಿ, ಆರಂಭವಾಗಿರುವುದರಿಂದ,ಆ ರಸ್ತೆ ಮುಚ್ಚಿದ ಪರಿಣಾಮ, ಆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳು, ಇದೇ ರಸ್ತೆಯಾಗಿ ಸಂಚರಿಸುತ್ತಿದೆ.

ಸಾರ್ವಜನಿಕರ ಪರವಾಗಿ ಸಂಬಂಧಪಟ್ಟವರಿಗೆ ನಾನು,ಹಲವಾರು ಬಾರಿ ಮನವಿ ನೀಡಿದರೂ, ವಾರ್ತಾ ಪತ್ರಿಕೆಗಳಲ್ಲಿ, ವರದಿಗಾರರು ಈ ಬಗ್ಗೆ ಎಚ್ಚರಿಸಿ ವರದಿ ನೀಡಿದರೂ, ಜನಪ್ರತಿನಿಧಿಗಳು / ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸದೆ ಇರುವುದರಿಂದ, ಇದು ಸಮಸ್ಯೆಯಾಗಿಯೇ ಉಳಿದಿದೆ. ಅಭಿವೃದ್ಧಿಯತ್ತ ಸಾಗುತ್ತಿರುವ ಪುತ್ತೂರಿಗೆ ಇದಕ್ಕಿಂತ ದೊಡ್ಡ ಕಳಂಕ ಬೇಕಿಲ್ಲ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ರಸ್ತೆಯನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಸಾರ್ವಜನಿಕರ ಪರವಾಗಿ ವಕೀಲರಾದ ನೂರುದ್ದೀನ್ ಸಾಲ್ಮರ ಅಗ್ರಹಿಸಿದ್ದಾರೆ





