Published
4 months agoon
By
Akkare News
1.ನರೇಂದ್ರ ರೈ ದೇರ್ಲ( ಕ್ಷೇತ್ರ ಸಾಹಿತ್ಯ )(9164561789 )ಕನ್ನಡ ಪ್ರಾಧ್ಯಾಪಕ, ಕೃಷಿಕ, ಅಂಕಣಗಾರ, ಸೂಕ್ಷ್ಮ ಸಂವೇದನೆಯ ಲೇಖಕ, ಪರಿಸರ ಕುರಿತ ಬರಹಗಾರ, ಚಲನಶೀಲ ಸಂಶೋಧಕರಾಗಿ ಕೆಲಸ ಮಾಡಿದವರು.ತಮ್ಮ ಪರಿಸರ ಸಂಬಂಧಿ ಬರಹಗಳಿಂದ ಗುರುತಿಸಿಕೊಂಡವರು. ನಿಸರ್ಗ ಪ್ರೇಮಿ. ಕನ್ನಡ ಪತ್ರಿಕೆಗಳಲ್ಲಿ ಅವರ ಲೇಖನಗಳು, ಅಂಕಣಗಳು ಪ್ರಕಟಗೊಂಡಿದೆ ಪರಿಸರ ಹಾಗೂ ಕೃಷಿ ಕುರಿತಾದ ಅನೇಕ ಕೃತಿಗಳನ್ನು ರಚಿಸಿದ್ದಾರೆ.

2. (ವೈದ್ಯಕೀಯ ಕ್ಷೇತ್ರ) ಡಾ. ಜೆ ಸಿ ಅಡಿಗ +919845081703 ಕಳೆದ 40 ವರ್ಷಗಳಿಂದ ಪುತ್ತೂರಿನ ಚೇತನ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, 5000ಕ್ಕೂ ಅಧಿಕ ಹೃದಯದ ಸಮಸ್ಯೆ ಇರುವವರಿಗೆ ಚಿಕಿತ್ಸೆ ನೀಡಿದ್ದು, ಸಾವಿರಕ್ಕೂ ಅಧಿಕ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಮಾಡಿರುತ್ತಾರೆ.
3. ಪ್ರೊ.ಝೇವಿಯರ್ ಡಿ ಸೋಜಾ (ಕ್ಷೇತ್ರ ಶಿಕ್ಷಣ)+919448253463 ಕಳೆದ 37 ವರ್ಷದಿಂದ ಬೋಧನಾ ಕ್ಷೇತ್ರದಲ್ಲಿ ಅಪಾರ ಅನುಭವ ಇರುವರು, ಕಳೆದ 12 ವರ್ಷಗಳಿಂದ ಪ್ರಾಂಶುಪಾಲರಾಗಿ ಸೇವೆ ಮಾಡುತ್ತಿದ್ದು,ಪುತ್ತೂರಿನ ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತರಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ .
4.ಡಾ. ರಾಜೇಶ್ ಬೆಜ್ಜಂಗಳ (ಕ್ಷೇತ್ರ ಸಾಹಿತ್ಯ ) +919448732414 ಇವರು ಪಾಡ್ದನಗಳಲ್ಲಿ ಕುಟುಂಬ ವ್ಯವಸ್ಥೆ’ ಎಂಬ ವಿಷಯದಲ್ಲಿ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದು, ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಜನಪದ, ಕನ್ನಡ ಸಾಹಿತ್ಯ ಮತ್ತು ಸಂಶೋಧನೆ ,ತುಳು ಭಾಷೆಯ ಬಗ್ಗೆ ಸಂಶೋಧನ ಪ್ರಬಂದ ಗಳನ್ನು ಮಂಡಿಸಿದ್ದಾರೆ. ಘನ ತ್ಯಾಜ್ಯ ವಿಲೇವಾರಿ ರಾಷ್ಟ್ರೀಯ ಸಮಿತಿ ಸದಸ್ಯರು ಮತ್ತು ಸಿ ಎನ್ ಜಿ ಯೋಜನೆಯ ಯೋಜನಾ ನಿರ್ದೇಶಕರು. ವಿವಿಧ ಪತ್ರಿಕೆಗಳಲ್ಲಿ 4೦೦ ಕ್ಕಿಂತಲೂ ಹೆಚ್ಚು ಲೇಖನಗಳು ಪ್ರಕಟಗೊಂಡಿದೆ. ಆಕಾಶವಾಣಿಯಲ್ಲಿಯೂ ಕವನಗಳು ಮತ್ತು ಭಾಷಣಗಳ ಪ್ರಸಾರವಾಗಿದೆ. ಎರಡು ಕವನ ಸಂಕಲನ ಮತ್ತು ಜೀವನಗಾಥೆ ಸೇರಿದಂತೆ ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.ಪ್ರಸ್ತುತ ಶ್ರೀನಿವಾಸ ವಿಶ್ವವಿದ್ಯಾಲಯ ದಲ್ಲಿ ಸಂಶೋಧನ ಪ್ರಾಧ್ಯಾಪಕರಾಗಿ 8 ಮಂದಿ ಪಿ ಎಚ್ ಡಿ ಸಂಶೋಧನ ವಿದ್ಯಾರ್ಥಿಗಳಿಗೆ ಹಾಗೂ 2 ಮಂದಿಗೆ Post Doctorate Fellow ಪದವಿಗೆ ಮಾರ್ಗದರ್ಶಕರಾಗಿದ್ದಾರೆ. ಕಣ್ಣೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮಂಡಳಿ ಸದಸ್ಯರಾಗಿದ್ದಾರೆ.

5. (ಕ್ಷೇತ್ರ :ಪತ್ರಿಕೋದ್ಯಮ) ಉದಯ ಕುಮಾರ್ ಯು ಎಲ್, ಉಪ್ಪಿನಂಗಡಿ (9741895998), ಇವರು ಕಳೆದ 33 ವರ್ಷಗಳಿಂದ ಹೊಸದಿಗಂತ ಪತ್ರಿಕೆಯ ಉಪ್ಪಿನಂಗಡಿ ವಲಯದ ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದು, ಕನ್ನಡಪ್ರಭ , ವಿಜಯವಾಣಿ ಪತ್ರಿಕೆಯ ವರದಿಗಾರನಾಗಿಯೂ ಕಾರ್ಯ ನಿರ್ವಹಣೆ . ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಎರಡು ಬಾರಿ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಸೇವೆ.
6. ಶಿಲ್ಪಿ ಎಂ. ವಾಸುದೇವ ಆಚಾರ್ಯ ( ಶಿಲ್ಪ ಕಲಾ ಕ್ಷೇತ್ರ ) (9901245515) ಇವರು ಕಳೆದ ಹಲವಾರು ವರ್ಷಗಳಿಂದ ಕಾಷ್ಠ ಶಿಲ್ಪ ಕೆತ್ತನೆ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಇವರು ಅನೇಕ ದೈವ ದೇವಸ್ಥಾನಗಳಿಗೆ ಪಲ್ಲಕ್ಕಿ ಕೆತ್ತನೆಯ ಬಾಗಿಲು ಪುಷ್ಪರತ ಸ್ವರ್ಣ ರಥ ಬೆಳ್ಳಿರಥ ಪುರಾತನ ಚಾವಣಿ ಮಾಡಿರುತ್ತಾರೆ. ದಕ್ಷಿಣ ಮೂರ್ತಿ ಕಶ್ಯಪ ಶಿಲ್ಪ ಶಾಸ್ತ್ರದ ಬಗ್ಗೆ ಅಪಾರಜ್ಞಾನ ಹೊಂದಿರುವ ಇವರು ಕಾರಿಂಜೇಶ್ವರ ದೇವಸ್ಥಾನದ ಪಲ್ಲಕ್ಕಿ,ಒಡಿಯೂರಿನ ಪುಷ್ಪರಥ, ಅತ್ತಾವರ ಉಮಾಮಹೇಶ್ವರ ದೇವಸ್ಥಾನ, ಆಲಡ್ಕ ಸದಾಶಿವ ದೇವಸ್ಥಾನ ಮುಂತಾದ ದೇವಸ್ಥಾನಗಳ ಕಲಾತ್ಮಕ ಚಾವಣಿಯ ಕೆಲಸವನ್ನು ಮಾಡಿದ್ದಾರೆ.
7. ಅಬೂಬಕ್ಕರ್ ಮುಲಾರ್ (ಕ್ಷೇತ್ರ: ಸಮಾಜ ಸೇವೆ)(9880206117) ಇವರು 36 ವರ್ಷಗಳಿಂದ ಸಮಾಜ ಸೇವೆ ಮಾಡಿಕೊಂಡು ಬಂದಿದ್ದು, ಪುತ್ತೂರಿನಲ್ಲಿ ಹಲವಾರು ಸೌಹಾರ್ದ ಸಮಾರಂಭಗಳನ್ನು ಆಯೋಜಿಸಿ ಸೌಹಾರ್ದತೆಯನ್ನು ಮೆರೆದಿರುತ್ತಾರೆ. ಕಳೆದ ಹತ್ತು ವರ್ಷಗಳಿಂದ ಬೇಸಿಗೆ ಸಂದರ್ಭದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಅಭಾವ ಆದಾಗ ಉಚಿತವಾಗಿ ಟ್ಯಾಂಕರ್ ಮೂಲಕ ನೀರು ಒದಗಿಸಿಕೊಟ್ಟಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಹಾಗೂ ಇನ್ನಿತರ ಶಿಕ್ಷಣಕ್ಕೆ ಆರ್ಥಿಕ ಸಹಾಯವನ್ನು ಮಾಡುತ್ತಿದ್ದು, ಕೊರೋನಾ ಸಂದರ್ಭದಲ್ಲಿ ಅನೇಕರ ಶವಸಂಸ್ಕಾರಕ್ಕೆ ಸಹಕರಿಸಿದ್ದು, ಉಚಿತ ಆಂಬುಲೆನ್ಸ್ ಸೇವೆಯನ್ನು ಕೂಡ ನೀಡಿದ್ದಾರೆ.
8. ಶ್ರೀ ರಮೇಶ್ ಉಳಯ ( ಕ್ಷೇತ್ರ :ಶಿಕ್ಷಣ ) (94824 88070)ಪ್ರಸ್ತುತ ಪುತ್ತೂರು ತಾಲೂಕಿನ ಸಂಜಯನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯ ಗುರುಗಳಾಗಿರುವ ಇವರು ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸರಿಸುಮಾರು30 ವರ್ಷಗಳ ಸೇವಾ ಅವಧಿಯನ್ನು ಪೂರೈಸಿರುವ ಇವರು ಶಿಕ್ಷಣ ಇಲಾಖೆಯ ರಾಜ್ಯಸಂಪನ್ಮೂಲ ವ್ಯಕ್ತಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಮೂಹ ಸಂಪನ್ಮೂಲ ವ್ಯಕ್ತಿ ಮುಂತಾದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
9. ಸಂಶುದ್ದೀನ್ ಸಾಲ್ಮರ (ಕ್ಷೇತ್ರ ಸಮಾಜ ಸೇವೆ:- (9483991000) ಇವರು ಕಳೆದ 29 ವರ್ಷಗಳಿಂದ ಪಾರಂಪರ್ಯ ವೈದ್ಯ ಪದ್ಧತಿಯ ಮೂಲಕ ಸಾವಿರಾರು ಮಂದಿಯ ಮೂಲವ್ಯಾಧಿ ರೋಗಿಗಳಿಗೆ ಚಿಕಿತ್ಸೆ ನೀಡಿ ಯಶಸ್ವಿಯಾಗಿದ್ದು, ಅನೇಕ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿ ಸಾವಿರಾರು ಮಂದಿಗೆ ಉಚಿತ ಔಷಧಿ ವಿತರಿಸುವ ಜೊತೆಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯದಲ್ಲೂ ಕೂಡ ಸೇವಾ ನಿರತರು.
10. . ಬಾಲಕೃಷ್ಣ ಪೂಜಾರಿ ಪಲ್ಲತ್ತಾರು (ಕ್ಷೇತ್ರ ದೈವಾರಾಧನೆ ) (9008149987) ದೈವಾ ರಾದನೆ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಇವರು ದೈವಗಳ ನೇಮದಲ್ಲಿ ಪಾರಿ ಹೇಳುವ ಮಧ್ಯಸ್ಥನಾಗಿ ಹಲವಾರು ಗ್ರಾಮ ದೈವ, ಕುಟುಂಬಗಳ ದೈವಗಳ ಚಾಕ್ರಿ ಮಾಡುತ್ತಿದ್ದಾರೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ತುಳುನಾಡಿನ ಸಂದಿ ಪಾರ್ದನ ಹಾಡಿರುತ್ತಾರೆ. ಹಲವಾರು ವೇದಿಕೆಗಳಲ್ಲಿ ದೈವಗಳ ಆಚರಣೆ ಹಾಗೂ ಅದರ ವಿಚಾರಗಳ ಮಾಹಿತಿ ಮಂಡಿಸಿದ್ದು,ಹಲವಾರು ದೈವಸ್ಥಾನಗಳ ಜೀರ್ಣೋದ್ಧಾರದಲ್ಲಿ ದೈವಗಳ ಚಾಕ್ರಿ ಮಾಡಿರುತ್ತಾರೆ .
11. ( ಕ್ಷೇತ್ರ: ಯಕ್ಷಗಾನ ) ವಿನೋದ್ ರೈ, ( 9481756606,) ಪ್ರಸ್ತುತ ಗೆಜ್ಜೆಗಿರಿ ಮೇಳದಲ್ಲಿ ಪೂರ್ಣ ಪ್ರಮಾಣದ ಕಲಾವಿದರಾಗಿ ಒಟ್ಟು 35 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಯಕ್ಷಗಾನ ಕಲಾವಿದರು.
12. ಪವಿತ್ರಾ ಹೆಗ್ಡೆ ಪುತ್ತೂರು.( ಕ್ಷೇತ್ರ: ರಂಗ ಭೂಮಿ)(8310107997) ಇವರು ಸುಮಾರು 17 ವರ್ಷಗಳಿಂದ ಚಲನಚಿತ್ರ. ಕಿರು ಚಿತ್ರ. ನಾಟಕ. ಹಾಸ್ಯ ಪ್ರಹಸನ ಮತ್ತು . ಕನ್ನಡದ ಪ್ರಖ್ಯಾತ ದೂರದರ್ಶನ ವಾಹಿನಿಗಳಲ್ಲಿ ಧಾರಾವಾಹಿಗಳು ಹಾಗೂ ಜಾಹೀರಾತುಗಳಲ್ಲಿ ಅಭಿನಯಿಸಿದ್ದಲ್ಲದೆ. ಹಾಸ್ಯ ಕಾರ್ಯಕ್ರಮಗಳಲ್ಲಿ ಅಭಿನಯಿಸಿ ಹಲವಾರು ಪ್ರಶಸ್ತಿಗಳನ್ನು. ಪಡೆದಿದ್ದು . ದೇಶ ವಿದೇಶಗಳಲ್ಲಿ 3000ಕ್ಕೂ ಹೆಚ್ಚು ವೇದಿಕೆಗಳಲ್ಲಿ ಕಲಾ ಸೇವೆಯನ್ನು ಮಾಡಿರುತ್ತಾರೆ.
13.( ಸಂಘ ಸಂಸ್ಥೆ ವಿಭಾಗ ) ಜೆ ಸಿ ಐ ಪುತ್ತೂರು, ಅಧ್ಯಕ್ಷ ಭಾಗ್ಯೇಶ್ ರೈ-(9620468869,) 1972ರಲ್ಲಿ ಕೂಡ್ಗಿ ರತ್ನಾಕರ ಶೆಣೈ ರವರ ಮುಂದಾಳತ್ವದಲ್ಲಿ ಪ್ರಾರಂಭಗೊಂಡ ಜೆ ಸಿ ಐ ಪುತ್ತೂರು, ಕಳೆದ 54 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ತಾಲೂಕಿನಾದ್ಯಾಂತ 2014ರಲ್ಲಿ ಮಿಷನ್-100 ಎನ್ನುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶೇ.100 ಫಲಿತಾಂಶ ಬರಲು ಮಾಡಿದ ತರಬೇತಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ 2 ಕೊಠಡಿಗಳ ನಿರ್ಮಾಣ, ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಕೊಠಡಿ ನಿರ್ಮಾಣ, ಸ್ವಚ್ಛ ಪುತ್ತೂರು, ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಸ್ಥಳೀಯ ಆಡಳಿತಕ್ಕೆ ಪ್ರತೀ ವರ್ಷ ಸಂಪೂರ್ಣ ಸಹಕಾರ, ಹಾರಾಡಿ ಶಾಲೆಗೆ ಕುಡಿಯುವ ನೀರಿನ ಟ್ಯಾಂಕ್ ಕೊಡುಗೆ, ಈ ವರ್ಷ ಡ್ರಗ್ಸ್ ಮುಕ್ತ ಪುತ್ತೂರು ಅಭಿಯಾನ, ಸೈಬರ್ ಕ್ರೈಂ ಜಾಗೃತಿ, ಸ್ಪರ್ಧಾತ್ಮಕ ಪರೀಕ್ಷೆಗಳ 100 ತರಬೇತಿಗಳನ್ನು ತಾಲೂಕಿನಾದ್ಯಾಂತ ಆಯೋಜನೆ ಮಾಡಲಾಗಿದೆ. ಈ ವರ್ಷದ ಅಧ್ಯಕ್ಷ ಭಾಗ್ಯೇಶ್ ರೈ ರವರ ನೇತೃತ್ವದಲ್ಲಿ ಜೆಸಿಐ ಪುತ್ತೂರು ಘಟಕವು ವಲಯದಲ್ಲೇ ಅತ್ಯಂತ ಉತ್ತಮ ಘಟಕ ಎಂಬ ಗೌರವಕ್ಕೆ ಪಾತ್ರವಾಗಿದೆ.



