Connect with us

ಸ್ಥಳೀಯ

ಎವಿಜಿ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ:

Published

on

ಧರ್ಮ ಹಾಗೂ ರಾಷ್ಟ್ರ ನಿರ್ಮಾಣ ಜೊತೆಯಾಗಿ ಸಾಗಿದಾಗ ದೇಶ ಶ್ರೀಮಂತ ವಾಗಲು ಸಾಧ್ಯ___ ಸಂಜೀವ ಮಠಂದೂರು.

ಪುತ್ತೂರು: ಇಲ್ಲಿನ ಬನ್ನೂರಿನ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಸಂಜೀವ ಮಠ೦ದೂರು ರವರು ರಾಷ್ಟ್ರಧ್ವಜಾರೋಹಣಗೈದು, ಭಾರತ ಮಾತೆಗೆ ದೀಪ ಬೆಳಗಿಸಿ ಮಾತನಾಡುತ್ತಾ , ಭಾರತವು ಪ್ರಜಾಪ್ರಭುತ್ವ ದೇಶ, ಸಂವಿಧಾನದ ಪೂರ್ವ ಪೀಠಿಕೆಯನ್ನು ಪುನರುಚ್ಚರಿಸಿದ ಅವರು ಸಂವಿಧಾನದ ಆಶೋತ್ತರದಂತೆ ದೇಶ ಮೊದಲು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು, ರಾಜ ಪರಂಪರೆಯಲ್ಲಿದ್ದ ನಮ್ಮ ದೇಶ ಇಂದು ಸರ್ವ ತಂತ್ರ ಗಣತಂತ್ರ ಪರಂಪರೆಗೆ ಬಂದಿದೆ. ಸಂವಿಧಾನ ಮೂಲಕ ಸಂಪತ್ತಿನ ಕ್ರೋಡೀಕರಣ ಆಗಿ ಧರ್ಮ ಹಾಗೂ ರಾಷ್ರನಿರ್ಮಾಣ ಜೊತೆಯಾಗಿ ಸಾಗಿದಾಗ ದೇಶ ಶ್ರೀಮಂತವಾಗಲು ಸಾಧ್ಯ . ರಾಷ್ಟ್ರ ಮೊದಲು ಎಂಬ ಕಲ್ಪನೆ ಎಲ್ಲರಲ್ಲೂ ಬರಬೇಕು ,ಪ್ರತಿಯೊಬ್ಬ ನಾಗರಿಕನು ತನ್ನ ಬದುಕನ್ನು ನಿರ್ಮಿಸುವ ಕೆಲಸಮಾಡಬೇಕು ಎನ್ನುತ್ತಾ ದಿನದ ಶುಭ ಸಂದೇಶವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಭಾರತೀಯ ಸೇನೆ ಯ ಮಾಜಿ ಸುಬೇದಾರ್ ಮೇಜರ್ ಶ್ರೀ ಚಂದ್ರಶೇಖರ್ ಗೌಡ ಗುಂಡೋಲೆ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು ನಾವೆಲ್ಲರೂ ಈ ದೇಶದ ಸತ್ಪ್ರಜೆಗಳಾಗಿ ಬದುಕಬೇಕು . ಜೀವನಕ್ಕೆ ಶಿಸ್ತು ಮುಖ್ಯ ಎನ್ನುತ್ತಾ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವನ್ನು ವಹಿಸಿದ ಶಾಲೆಯ ಅಧ್ಯಕ್ಷರಾದ ಶ್ರೀ ವೆಂಕಟರಮಣಗೌಡ ಕಳುವಾಜೆ ರವರು ಮಾತನಾಡುತ್ತಾ ನಾವೆಲ್ಲರೂ ನಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ಮಾಡುವುದರಿಂದ ಗಣರಾಜ್ಯೋತ್ಸವಕ್ಕೆ ಒಂದು ವಿಶೇಷ ಅರ್ಥ ಉಂಟಾಗುತ್ತದೆ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಆಡಳಿತ ಸಮಿತಿಯ ನಿರ್ದೇಶಕರಾದ ಶ್ರೀಮತಿ ಪ್ರತಿಭಾ ದೇವಿ, ಶ್ರೀ ಸೀತಾರಾಮ ಕೇವಳ, ಶಾಲಾ ಆಡಳಿತ ಅಧಿಕಾರಿಯಾದ ಶ್ರೀ ಗುಡ್ಡಪ್ಪಗೌಡ ಬಲ್ಯ, ಶಾಲೆಯ ಉಪಾಧ್ಯಕ್ಷರಾದ ಶ್ರೀ ಉಮೇಶ್ ಮಲುವೇಳು ಮತ್ತು ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಅಮರನಾಥ ಪಟ್ಟೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಗಳಾದ ಅದ್ವಿಕ್ ಬಂಜನ್, ಶಿವಾನಿ, ಅನಿಕ ದಿನದ ಬಗ್ಗೆ ಮಾತನಾಡಿದರು. ಅದ್ವಿತಿ ಬಂಜನ್, , ಅನುಪ್ ರಾಜ್ ಮತ್ತು ತಂಡ, ಹಾಗೂ ಶೋಭಿತ್ ಹಾಗೂ ತಂಡದವರು ದೇಶಭಕ್ತಿ ಗೀತೆ ಹಾಡಿದರು. ವಿಖ್ಯಾತ್ ಸಂವಿಧಾನದ ಪೀಠಿಕೆ ವಾಚಿಸಿದರು. ಶಿಕ್ಷಕಿ ಶ್ರೀಮತಿ ರಾಧ ಇವರು ಗಣರಾಜ್ಯೋತ್ಸವ ದಿನದ ಮಹತ್ವದ ಬಗ್ಗೆ ಭಾಷಣವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ನಿರ್ದೇಶಕರುಗಳು, ಪೋಷಕರು ಬೋಧಕ -ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪಾಲ್ಗೊಂಡರು. ವಿದ್ಯಾರ್ಥಿನಿಯರಾದ ಶ್ರೀವಿಕಾ.ಪೈ, ಚೇತನ ಕೀರ್ತಿ, ಅನಿಕ, ಜ್ಞಾನ, ಮತ್ತು ಅನ್ವಿ ಪ್ರಾರ್ಥಿಸಿದರು. ಶಾಲೆಯ ಸಂಚಾಲಕರಾದ ಎ.ವಿ ನಾರಾಯಣ ರವರು ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು. ಶ್ರೀಮತಿ ರಂಜಿತ ರೈ ವಂದನಾರ್ಪಣೆಗೈದು, ಶ್ರೀಮತಿ ಹರ್ಷಿತಾ ಅತಿಥಿಗಳ ಪರಿಚಯವನ್ನು ಮಾಡಿ, ಶ್ರೀಮತಿ ರೀಮಾ ಲೋಬೋ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿಯಾರಾದ ಶ ಸವಿತಾ ಕೆ, ಯಶುಭ ರೈ, ಸುಚಿತ, ಶ್ವೇತಾ, ತೀರ್ಥ , ಚಂದ್ರಿಕಾ , ಹಿತ ಶ್ರೀ, ಪ್ರಕ್ಷುತ ಇವರು ಕಾರ್ಯಕ್ರಮದಲ್ಲಿ ಸಹಕರಿಸಿದರು. ಕೊನೆಗೆ ಎಲ್ಲರಿಗೂ ಉಪಹಾರ ವ್ಯವಸ್ಥೆಯನ್ನು ಏರ್ಪಡಿಸಲಾಯಿತು.

 

Continue Reading
Click to comment

Leave a Reply

Your email address will not be published. Required fields are marked *

Advertisement