Published
3 months agoon
By
Akkare News

ಮನರೇಗಾ ಹೆಸರಲ್ಲಿ ನಮ್ಮ ಕ್ಷೇತ್ರದಲ್ಲೇ ಮ್ಯಾರಥಾನ್ ಮಾಡಿದ್ದೇವೆ. ಮನರೇಗಾ ಹೆಸರು ಬದಲಾವಣೆ ಹಿಂಪಡೆದು, ಹಿಂದೆ ಇದ್ದಿದ್ದನ್ನೇ ಮುಂದುವರೆಸಲಿ ಎಂದರು.
ವಿಬಿ ಜಿ ರಾಮ್ ಜಿ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದ ಅನುಪಾತ 60:40 ಯಾವುದೇ ಕಾರಣಕ್ಕೂ ನಡೆಯಲ್ಲ. ಯಾವ ಸರ್ಕಾರವೂ ಬಂಡವಾಳ ಹಾಕಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿ ವಲಯದಲ್ಲಿ ಎಐ ಬಳಕೆಗೆ ಒತ್ತು ನೀಡಿರುವ ಕುರಿತ ಪ್ರಶ್ನೆಗೆ, ಮನರೇಗಾಗೂ ಕೂಡಾ ಎಐ ಬಳಕೆ ಮಾಡಿ ಕೂಲಿ ತೀರ್ಮಾನ ಮಾಡ್ತೀವಿ ಎಂದಿದ್ದರು.
ವ್ಯವಸಾಯದ ಕಾಲದಲ್ಲಿ ಕೂಲಿ ಕೊಡಲಿಲ್ಲ ಇವರು. ಎಐ ನಿಂದ ವ್ಯವಸಾಯಕ್ಕೆ ಪ್ರಯೋಜನವಿಲ್ಲ ಎಂದು ಟೀಕಿಸಿದರು.
ರೇಷ್ಮೆ ಬೆಳೆಗೆ ಉತ್ತೇಜನ ಕೊಡಬೇಕು. ಸಕ್ಕರೆ ಬೆಲೆ ಯಾಕೆ ಏರಿಕೆ ಮಾಡ್ತಿಲ್ಲ? ಇದರಿಂದ ರೈತರಿಗೆ ನಷ್ಟ ಆಗ್ತಿದೆ. ಸಕ್ಕರೆ ಬೆಲೆ ಏರಿಸದಿದ್ದರೆ ಸಹಕಾರ ಕ್ಷೇತ್ರಗಳು ಮುಚ್ಚುವ ಹಂತಕ್ಕೆ ಬರುತ್ತವೆ.ನಮ್ಮ ಭಾಗದ ಐದು ಜಿಲ್ಲೆಯಲ್ಲಿ ಕಬ್ಬು ಬೆಳೆಯುತ್ತಾರೆ. ರೈತರಿಗೆ ಕೇಂದ್ರ ಸರ್ಕಾರ ಅವರಿಗೆ ಯಾವ ಸಹಾಯ ಮಾಡಿದೆ? ಎಂದು ಪ್ರಶ್ನಿಸಿದರು.
ಬೆಂಗಳೂರಿಗೆ ಹೈಸ್ಪೀಡ್ ರೈಲು ಘೋಷಣೆ ಕುರಿತು ಪ್ರತಿಕ್ರಿಯಿಸಿ, ಯಾವ್ ಹೈ ಸ್ಪೀಡ್ ರೈಲು? ಯಾವ ಸ್ಪೀಡ್ ರೈಲೂ ಬರಲ್ಲ. ಆ ಯೋಜನೆಯ ಕೇಂದ್ರ ಮತ್ತು ರಾಜ್ಯಸ ಅನುಪಾತ 50:50 ಅಡಿ ಆಗಲ್ಲ. ಬೇಕಿದ್ರೆ 90:10 ಕೊಡಲಿ. ಆಗ ನಾವು ಶೇ 10ರಷ್ಟು ಕೊಡುತ್ತೇವೆ. ಬೇರೆ ರಾಜ್ಯಗಳಿಗೆ ಅವರೇ ಮಾಡಿಕೊಟ್ಟಿದ್ದಾರೆ. ನಮ್ಮ ರಾಜ್ಯಕ್ಕೂ ಶೇ 90ರಷ್ಟು ಮಾಡಲಿ ಎಂದರು
ಬಜೆಟ್ ನಲ್ಲಿ ಬೆಂಗಳೂರಿಗೆ ಹೆಚ್ಚಿನ ಕೊಡುಗೆಯ ನಿರೀಕ್ಷೆ ಇತ್ತು. ಪ್ರಧಾನಿ ಮೋದಿ ಅವರೇ ನಗರವನ್ನು ಗ್ಲೋಬಲ್ ಸಿಟಿ ಅಂತ ಹೇಳಿದ್ರು. ಆ ಗ್ಲೋಬಲ್ ಸಿಟಿಗೆ ಏನು ಒತ್ತು ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದರು.





