Connect with us

ಸ್ಥಳೀಯ

ಚಿತ್ರಕಲಾ “ದಿಗ್ಗಜ” “ಪ್ರಸಾದ್ ಕೊಯಿಲ” ರವರ ಒಂದು ಕಿರು ಪರಿಚಯ ಪ್ರಸಾದ್ ಕೊಯಿಲ “ಆರ್ಟಿಸ್ಟ್” ಮಾತ್ರವಲ್ಲ.. ಇವರು ಕಲಾವಿದರ “ಹಾರ್ಟ್ ಈಸ್ಟ್”

Published

on

ಪ್ರಸಾದ್ ಕೊಯಿಲ ಇವರು ಅಪ್ಪಟ ಕಲಾಮಾತೆಯ ಪುತ್ರ. ಹೆಸರು ಪ್ರಸಾದ್ ಕೊಯಿಲ. ಬಾಲ್ಯದಲ್ಲಿ ಚಿತ್ರ ಕಲಾವಿದರಾಗಿ ಪ್ರಶಸ್ತಿಗಳು ಬಾಚುತ್ತಿದ್ದ ಇವರಿಗೆ ರಂಗಭೂಮಿಯ ಆಸಕ್ತಿ ಮೂಡಿ ಪ್ರಸ್ತುತ ರಂಗಭೂಮಿಯನ್ನೆ ಜೀವನದ ಭಾಗವಾಗಿಸಿದ ಕಲಾ ಪ್ರೇಮಿ ಇವರು.
ಆಯಾ ಖಂಡಿತವಾಗಿ ಪ್ರಸಾದರ ಕೈಯಲ್ಲಿ ಕಲಾದೇವಿ ನೆಲೆಸಿದ್ದಾಳೆ. ವ್ಯಕ್ತಿ ಯೊಬ್ಬನನ್ನು ಪಾತ್ರಕ್ಕೆ ತಕ್ಕಂತೆ ಮುಖದ ಚಹರೆಯನ್ನು ಬದಲಾಯಿಸುವುದು ಸುಲಭದ ಮಾತಲ್ಲ. ಆ ನಿಟ್ಟಿನಲ್ಲಿ ಹೆಸರಾಂತ ಮೇಕಪ್ ಕಲಾವಿದರ ಸಾಲಿಗೆ ಪ್ರಸಾದರು ಸೇರುತ್ತಾರೆ. ಪಶು ಇಲಾಖೆಯ ಕೊಯಿಲ ಫಾರ್ಮ್‌ನ ನಿವೃತ್ತ ಉದ್ಯೋಗಿ ಹುಕ್ರಪ್ಪ ಗೌಡ ಮತ್ತು ಸುಂದರಿ ದಂಪತಿಗಳ ಜೇಷ್ಠ ಪುತ್ರನಾಗಿ ಜನಿಸಿದ ಇವರು ಕೊಯಿಲ ಮತ್ತು ವಿಟ್ಲದಲ್ಲಿ ವಿದ್ಯಾಭ್ಯಾಸ ಮುಗಿಸಿದರು. ಇವರ ಮಾವ ಖ್ಯಾತ ನಾಟಕ ಕಲಾವಿದ ದಿವಂಗತ ಸುರೇಶ್ ವಿಟ್ಲ ರವರ ಸ್ಪೂರ್ತಿ ಯಿಂದ ಕಲಾಪ್ರಪಂಚಕ್ಕೆ ಕಾಲಿರಿಸಿದರು. ಉತ್ತಮ ಆರ್ಟಿಸ್ಟ್ ಆಗಿದ್ದ ಇವರು ಶ್ರೀ ರಾಮಕುಂಜೇಶ್ವರ ಕಲಾ ರಂಗ ರಾಮಕುಂಜದ ರಂಜೇಕಳಕಲಾರಿಗೆ ಶಿಷ್ಯನಾಗಿ ಮೇಕಪ್ ಲೋಕಕ್ಕೆ ಎಂಟ್ರಿಯಾದರು.

ಹಲವಾರು ರಂಗಮಂಟಪ ರಚನೆ, ದ್ವಾರ,ಬೋರ್ಡಿಂಗ್, ಅಲ್ಲದೆ ಹಲವಾರು ನಾಟಕ, ನೃತ್ಯ, ಪ್ರಹಸನ ಮುಂತಾದ ಕಲಾಪ್ರಕಾರಗಳಲ್ಲಿ ಕಲಾವಿದರಿಗೆ ಬಣ್ಣ ಹಚ್ಚಿರುವ ಇವರು ಪ್ರಥಮವಾಗಿ ವೈಷ್ಣವಿ ಕಲಾವಿದರು ಮಂಜೇಶ್ವರ ದ ಮೂಲಕ ನಾಟಕ ರಂಗ ಪ್ರವೇಶಿಸಿದ ಅಪ್ಪಟ ಕಲಾಮಾತೆಯ ಪುತ್ರ ಪ್ರಸಾದ್ ಕೊಯಿಲ ಅರ್ಟ್ಸ್ ತಂಡದಲ್ಲಿ ದುಡಿದು ಪ್ರಸ್ತುತ ಅಮ್ಮಾ ಕಲಾವಿದರು ತಂಡದಲ್ಲಿದ್ದಾರೆ. ಖ್ಯಾತ ಕಲಾವಿದ ಸುಂದರ್ ರೈ ಮಂದಾರ ಇವರ ಆಪ್ತ ಮೇಕಪ್ ಮ್ಯಾನ್ ಆಗಿರುವ ಇವರು ಮಂದಾರ, ಪಡೀಲ್, ಪಾಣಾಜೆ, ಬೋಳಾರ್ ಅವರಂತಹ ಹೆಸರಾಂತ ಕಲಾವಿದರಿಂದ ಶಹಬ್ಬಾಸ್ ಗಿರಿ ಪಡೆದಿದ್ದುದನ್ನು ಮೇಕಪ್ ನಾನು ಎಂದೆಂದಿಗೂ ಎಂದು ಅತ್ಯಂತ ವಿನಮ್ರತೆಯಿಂದ ಹೇಳುವ ಪ್ರಸಾದರದ್ದು ಮಾತು ಕಡಿಮೆ ಹೆಚ್ಚು ದುಡಿಮೆ ಯ ಮನೋಭಾವದವರು. ಮಾತ್ರವಲ್ಲದೆ ಒಂದೆರಡು ನಾಟಕದಲ್ಲಿ ಬಣ್ಣ ಹಚ್ಚಿ ಕಲಾವಿದರಾಗಿಯೂ ಸೈ ಎನಿಸಿದವರು. ಡಿಸೈನ್ ಕಲಾವಿದರಾಗಿ ಜಿಲ್ಲೆಯ ಹಲವು ಜಾತ್ರೆಗಳ ಹೆಸರು ಡಿಸೈನ್ ಮಾಡಿರುವುದಲ್ಲದೆ ಚಿತ್ರ ಕಲಾವಿದರಾಗಿಯೂ ಹೆಸರು ಗಳಿಸಿರುತ್ತಾರೆ.

ಪ್ರಸಾದರ ಖ್ಯಾತಿ ಇನ್ನಷ್ಟು ಉತ್ತುಂಗಕ್ಕೇರಲಿ, ಕಲಾ ಮಾತೆಯ ಆಶಿರ್ವಾದ ಸದಾ ಇರಲಿ ” ಪ್ರಸಾದ್ ಕೊಯಿಲ ರವರು ಕೇವಲ ಆರ್ಟಿಸ್ಟ್ ಮಾತ್ರ ವಲ್ಲ, ಇವರು ಕಲಾವಿದರ “ಹಾರ್ಟ್ “ಈಸ್ಟ್ (ಹೃದಯದಲ್ಲಿ ನೆನೆಸಿರುತ್ತಾರೆ)ಆಗಿರುತ್ತಾರೆ.ಪ್ರ ಸಾದರ ಖ್ಯಾತಿ ಇನ್ನಷ್ಟು ಉತ್ತುಂಗಕ್ಕೇರಲಿ, ಕಲಾ ಮಾತೆಯ ಆಶಿರ್ವಾದ ಸದಾ ಇರಲಿ.ಅಕ್ಕರೆ ನ್ಯೂಸ್ “ಇದು ವಿಸ್ವಾಸದ ದ್ವನಿ.

Continue Reading
Click to comment

Leave a Reply

Your email address will not be published. Required fields are marked *

Advertisement