Published
11 hours agoon
By
Akkare News
ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಮಹಿಳಾ ಠಾಣೆಯ ಮುಂಭಾಗದಲ್ಲಿರುವ ಅನಾಥ ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿದೆ. ಆದರೆ ನಗರಸಭೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆಯೇ?ಎಂದು ಸಾರ್ವಜನಿಕರಿಂದ ಆರೋಪ ಕೇಳಿ ಬಂದಿದೆ.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಲ್ನಾಡಿನಿಂದ ಉಳ್ಳಾಲ್ತಿಯ ಭಂಡಾರ ಬರುವ ದಾರಿಯಲ್ಲಿರುವ ಕಟ್ಟಡವನ್ನು ಈಗಾಗಲೇ ಕೆಡವಿ ಹಾಕಲಾಗಿದೆ. ಅದರ ಪಳೆಯುಳಿಕೆಯಂತೆ ಉಳಿದಿರುವ ಕಟ್ಟಡ ಹಾಗೆಯೇ ಉಳಿದಿದೆ. ಇದರ ಪಕ್ಕದಲ್ಲಿಯೇ ಜನರು ವಾಹನಗಳಿಗೆ ಕಾಯುತ್ತಿರುತ್ತಾರೆ. ಯಾವುದೇ ಸಂದರ್ಭದಲ್ಲಿ ಇಲ್ಲಿ ಅಪಾಯ ಸಂಭವಿಸಬಹುದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಕೂಡಲೇ ತೆರವು ಮಾಡಿ ಸಂಭಾವ್ಯ ದುರಂತವನ್ನು ತಪ್ಪಿಸಬೇಕಿದೆ.




