Published
4 days agoon
By
Akkare News
ನವದೆಹಲಿ: ಪಶ್ಚಿಮ ಬಂಗಾಳ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೆ ತಡ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಮುಖ್ಯಸ್ಥೆ, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ದೀದಿ)ಅವರಿಗೆ ಏಟಿನ ಮೇಲೆ ಏಟು ಬೀಳುತ್ತಿವೆ. ಇದೀಗ ಟಿಎಂಸಿಯ ರೆಬಲ್ ಸಂಸದರ ಬೃಹತ್ ಗುಂಪು ಎನ್ಡಿಗೆ ಸೇರ್ಪಡೆಯಾಗಲು ನಿರ್ಧರಿಸುವ ಮೂಲಕ ಆಘಾತ ನೀಡಿದೆ. ಟಿಎಂಸಿ ಶಾಸಕರ ಬಂಡಾಯ ಬೆನ್ನಲ್ಲೇ, 20 ಸಂಸದರು ಬಂಡಾಯ ಏಳುವ ಮೂಲಕ ಟಿಎಂಸಿ ಚಿದ್ರ ಚಿದ್ರವಾಗಲಿದೆ ಎಂಬ ಮುನ್ಸೂಚನೆ ಸಿಕ್ಕಂತಾಗಿದೆ. 
ಸದಾ ಕಾಲ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಮೇಲೆ ಕಿಡಿ ಕಾರುವ ಹಾಗೂ ದೆಹಲಿಯಲ್ಲಿ ಮೋದಿಯನ್ನು ಸೋಲಿಸುವುದಾಗಿ ಗುಡುಗಿದ್ದ ದೀದಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಸೋಲುಣಿಸಿತ್ತು. ಅದರ ಬೆನ್ನಲ್ಲೇ ಶಾಸಕರು ಬಂಡಾಯವೆದ್ದು ದೀದಿಯ ನಿದ್ದೆಗೆಡಿಸಿದ್ದರು. ಇದೀಗ ಟಿಎಂಸಿಯ 20 ಸಂಸದರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಇದರಿಂದ ಎನ್ಡಿಎ ಸಂಸದರ ಸಂಖ್ಯೆ 300 ದಾಟಲಿದೆ. ಟಿಎಂಸಿಗೆ ರಾಜಕೀಯವಾಗಿ ದೊಡ್ಡ ಹೊಡೆತ, ಹಿನ್ನಡೆ ಇದು ಎಂದು ವಿಶ್ಲೇಷಿಸಲಾಗಿದೆ. 
* ಎನ್ಡಿಎ- 292 (ಹಾಲಿ ಸಂಸದರು) * ಟಿಎಂಸಿ 20 (ಎನ್ಡಿಎ ಸೇರಲಿರುವ ಟಿಎಂಸಿ ಸಂಸದರು) * ಒಟ್ಟು 312 (ಸೇರ್ಪಡೆ ಬಳಿಕ ಬಿಜೆಪಿ ಎಂಪಿಗಳ ಸಂಖ್ಯೆ) ಓಂ ಬಿರ್ಲಾಗೆ ಟಿಎಂಸಿ ರೆಬಲ್ ಸಂಸದರ ಪತ್ರ 28 ಸಂಸದರನ್ನು ಹೊಂದಿದ್ದ ಟಿಎಂಸಿ ಪಕ್ಷದ 20 ಬಂಡಾಯ ಸಂಸದರು ಲೋಕಸಭೆಯಲ್ಲಿ ಆಡಳಿರೂಢ ಎನ್ಎಡಿ ಮೈತ್ರಿಕೂಟ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಈ ಸಂಬಂಧ ಸಭಾಪತಿ ಓಂ ಬಿರ್ಲಾಗೆ ಅವರಿಗೆ ಬಂಡಾಯ ಸಂಸದರು ಪತ್ರ ಬರೆದಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗದಂತೆ ಮನವಿ ಮಾಡಿಕೊಂಡಿದ್ದಾರೆಂದುದು ತಿಳಿದು ಬಂದಿದೆ. 




