Connect with us

ಇತರ

ಪುಣಚ: ಎಸ್‌ಟಿ ಕುಟುಂಬಕ್ಕೆ ಹಕ್ಕು ಪತ್ರ ವಿತರಣೆ ಬಡವರನ್ನು ಮುಂದಿಟ್ಟು ರಾಜಕೀಯ ಮಾಡುವ ಜಾಯಾಮಾನ ನಮ್ಮದಲ್ಲ; ಶಾಸಕ ಅಶೋಕ್ ರೈ

Published

on

​ಪುತ್ತೂರು: ನೀವು ೨೦೨೧ ರಲ್ಲಿ ೯೪ ಸಿ ಗೆ ಅರ್ಜಿ ಹಾಕಿದರೂ ನಿಮಗೆ ಹಕ್ಕು ಪತ್ರ ನೀಡಿರಲಿಲ್ಲ, ನಿಮ್ಮ ಅರ್ಜಿಯನ್ನು ಮಾನ್ಯ ಮಾಡುವಂತೆ ನಾನೇ ತಹಶಿಲ್ದಾರ್‌ಗೆ ಹೇಳಿ ಅದನ್ನು ವಿಲೇವಾರಿ ಮಾಡಿಸಿದ್ದೆ, ಇನ್ನೇನು ಹಕ್ಕು ಪತ್ರ ಕೊಡಬೇಕು ಅನ್ನವಷರಲ್ಲಿ ನೀವು ಬಂಟ್ವಾಳ ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಿದ್ದೀರಿ, ನಿಮಗೆ ಯಾರು ಹಕ್ಕು ಪತ್ರ ಕೊಟ್ಟಿಲ್ಲವೋ ಅವರೇ ನಿಮ್ಮನ್ನು ತಾಲೂಕು ಕಚೇರಿ ಎದುರು ಕೂರಿಸಿ ನನ್ನನ್ನು , ನನ್ನ ತಂದೆಗೂ ಬೈಸಿದ್ದೀರಿ, ಅವರು ನಿಮ್ಮನ್ನು ಬಳಸಿಕೊಂಡದ್ದು ಅವರ ರಾಜಕೀಯ ಲಾಭಕ್ಕೋಸ್ಕರ ಹೊರತು ನಿಮಗೆ ಹಕ್ಕು ಪತ್ರ ಕೊಡಿಸಬೇಕು ಎಂಬ ಉದ್ದೇಶವೇ ಇರಲಿಲ್ಲ. ನಾವು ಬಡವರ ಮುಂದಿಟ್ಟು ಎಂದೂ ರಾಜಕೀಯ ಮಾಡುವುದಿಲ್ಲ. ನಿಮ್ಮನ್ನು ತಾಲೂಕು ಕಚೇರಿ ಮುಂದೆ ಕೂರಿಸಿದವರು ಈಗ ಎಲ್ಲಿದ್ದಾರೆ? ಇದು ಹಕ್ಕು ಪತ್ರಕ್ಕಾಗಿ ಧರಣಿ ಕುಳಿತ ಪುಣಚ ಗ್ರಾಮದ ಮೂರು ಮಹಿಳೆಯರಲ್ಲಿ ಶಾಸಕ ಅಶೋಕ್ ರೈ ಕೇಳಿದ ಪ್ರಶ್ನೆ.

ಪುಣಚಾ ಗ್ರಾಮದ ದೇವಿನಗರ ಎಸ್ ಟಿ ಕಾಲನಿಯ ಮೂರು ಕುಟುಂಬಗಳು ತಮ್ಮ ಮನೆಯ ಅಡಿಸ್ಥಳದ ಹಕ್ಕು ಪತ್ರಕ್ಕಾಗಿ ೯೪ ಸಿ ಯಡಿ ಅರ್ಜಿ ಹಾಕಿದ್ದರು. ೨೦೨೧ ರಲ್ಲಿ ಅರ್ಜಿ ಹಾಕಿದ್ದರೂ ಇವರಿಗೆ ಹಕ್ಕು ಪತ್ರ ನೀಡಿರಲಿಲ್ಲ. ಇವರ ಅರ್ಜಿಯನ್ನು ಶಾಸಕ ಅಶೋಕ್ ರೈ ವಿಲೇವಾರಿ ಮಾಡಿಸಿ ಹಕ್ಕು ಪತ್ರ ಕೊಡುವಂತೆ ತಹಶಿಲ್ದಾರ್‌ಗೆ ಸೂಚನೆ ನೀಡಿದ್ದರು. ಎಲ್ಲವೂ ರೆಡಿಯಾಗುವ ವೇಳೆ ಹಕ್ಕು ಪತ್ರ ಕೊಟ್ಟಿಲ್ಲ ಎಂದು ಬಂಟ್ವಾಳ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು.ಗಿರಿಧರ್ ನಾಯ್ಕ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಯವರು ಸೇರಿಕೊಂಡಾಗ ಪ್ರತಿಭಟನೆ ರಾಜಕೀಯ ಸ್ವರೂಪ ಪಡೆದಿತ್ತು.

ಬಿಜೆಪಿಯವರು ಬಂದು ಹಾಳು ಮಾಡಿದ್ದು ನಮಗೆ ಹಕ್ಕು ಪತ್ರ ಕೊಡಿ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಅವರ ಬಳಿ ಅವರು ಶಾಸಕರಾಗಿದ್ದ ವೇಳೆ ಹೋಗಿದ್ದೆವು ಆದರೆ ಅವರು ಕೊಟ್ಟಿರಲಿಲ್ಲ. ಆ ಬಳಿಕ ಅಶೋಕ್ ರೈ ಶಾಸಕರಾದಾಗ ಅವರ ಬಳಿ ಬಂದು ಹೇಳಿದಾಗ ಕೊಡಿಸುವ ಭರವಸೆ ನೀಡಿದ್ದರು. ನಮ್ಮ ಹಕ್ಕು ಪತ್ರಕ್ಕಾಗಿ ಹಣ ಎಲ್ಲ ಕಟ್ಟಿದ್ದೆವು. ಆ ವೇಳೆ ಗಿರಿಧರ್ ನಾಯ್ಕ್ ಬಂದು ನಿಮಗೆ ಶಾಸಕ ಅಶೋಕ್ ರೈ ಹಕ್ಕು ಪತ್ರ ಕೊಡುವುದಿಲ್ಲ, ನಿಮಗೆ ಹಕ್ಕು ಪತ್ರ ಬೇಕಾದರೆ ಪ್ರತಿಭಟನೆ ಮಾಡಬೇಕು. ನಾನಿದ್ದೇನೆ ಬನ್ನಿ ಎಂದು ನಮ್ಮನ್ನು ಕರೆದುಕೊಂಡು ಹೋಗಿ ಬಂಟ್ವಾಳ ತಹಶಿಲ್ದಾರ್ ಕಚೇರಿ ಮುಂದೆ ಕೂರಿಸಿದ್ದಾರೆ. ಮೂರು ದಿನ ಕೂತಿದ್ದೆವು. ಎರಡನೇ ದಿನ ಬಿಜೆಪಿ ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಕೆಲವರು ಬಂದು ನಮ್ಮ ಎದುರೇ ಭಾಷಣ ಮಾಡಿದ್ದಾರೆ. ಶಾಸಕರ ತಂದೆಯನ್ನು ಬೈದಿದ್ದಾರೆ. ಅವರು ಹಾಗೆಲ್ಲಾ ಮಾಡ್ತಾರೆಂದು ನಮಗೆ ಗೊತ್ತಿರಲಿಲ್ಲ. ಹಕ್ಕು ಪತ್ರ ಕೊಡಿಸ್ತೇವೆ ಎಂದು ಬಡವರಾದ, ತಿಳುವಳಿಕೆ ಇಲ್ಲದ ನಮ್ಮನ್ನು ಬಿಜೆಪಿಯವರು ಮೋಸ ಮಾಡಿದ್ದಾರೆ. ನಾವು ಶಾಸಕ ಅಶೋಕ್ ರೈ ಅವ ಬಳಿ ಹೋಗುತ್ತೇವೆ ಎಂದಾಗ ಬಿಜೆಪಿಯವರು ಅವರ ಬಳಿ ಹೋಗಬೇಡಿ ನಾವು ತೆಗೆಸಿಕೊಡುತ್ತೇವೆ ಎಂದು ಹೇಳಿದ್ದರು. ಅಶೋಕ್ ರೈ ಅವರ ಬಳಿ ನಾವು ಹೋಗುತ್ತಿದ್ದರೆ ಇಷ್ಟೆಲ್ಲಾ ರಾದ್ದಾಂತ ಆಗುತ್ತಿರಲಿಲ್ಲ. ಬಿಜೆಪಿಯವರು ಬಂದು ಎಲ್ಲವನ್ನೂ ಹಾಳು ಮಾಡಿದ್ದರು. ನಮಗೆ ಹಕ್ಕು ಪತ್ರ ಕೊಡಿಸುವುದು ಅವರ ಉದ್ದೇಶವಾಗಿರಲಿಲ್ಲ, ನಮ್ಮನ್ನು ಮುಂದಿಟ್ಟು ಅವರ ರಾಜಕೀಯಕ್ಕೋಸ್ಕರ ನಮ್ಮನ್ನು ಬಲಿಪಶು ಮಾಡಿದ್ದಾರೆ. ಪ್ರೇಮ, ಫಲಾನುಭವಿ  

​ ನಮ್ಮನ್ನು ಗುಂಡಿಗೆ ಹಾಕಿ ಗಿರಿಧರ್ ನಾಯ್ಕ್ ಶಾಸಕರ ಕಚೇರಿಗೆ ಬಂದಿದ್ದಾರೆ ನಮ್ಮನ್ನು ತಾಲೂಕು ಕಚೇರಿ ಮುಂದೆ ಕೂರಿಸಿದ್ದು ಮಾತ್ರವಲ್ಲದೆ ಬಿಜೆಪಿಯವರನ್ನು ಕರೆಸಿ ಶಾಸಕ ಅಶೋಕ್ ರೈ ವಿರುದ್ದ ಭಾಷಣ ಮಾಡಿಸಿ, ಶಾಸಕರ ತಂದೆಗೂ ಬೈಯುವಂತೆ ಮಾಡಿದ್ದ ಗಿರಿಧರ್ ನಾಯ್ಕ್ ಪ್ರತಿಭಟನೆ ಮುಗಿದ ಬಳಿಕ ನಮ್ಮನ್ನು ಕೈ ಚೆಲ್ಲಿದ್ದಾರೆ. ಪ್ರತಿಬಟನೆಯಲ್ಲಿಭಾಗವಹಿಸಿದ್ದ ಬಿಜೆಪಿಯವರು ಆ ಬಳಿಕ ನಮ್ಮನ್ನು ಸಂಪರ್ಕ ಮಾಡದೆ ಎಲ್ಲಿ ಹೋಗಿದ್ದಾರೆ ಎಂಬುದು ನಮಗೆ ಗೊತ್ತಾಗಿಲ್ಲ. ಗಿರಿಧರ್ ನಾಯ್ಕ್ ಶಾಸಕರ ಕಚೇರಿಗೆ ಬಂದು ನನಗೆ ವಿಷಯವೇ ಗೊತ್ತಿಲ್ಲ, ನಾನು ಕೂರಿಸಿಲ್ಲ, ನಾನು ಶಾಸಕರ ವಿರುದ್ದ ಪ್ರತಿಭಟನೆ ನಡೆಸಿಲ್ಲ, ನಾನು ಬಿಜೆಪಿಯವರನ್ನು ಕರೆಸಿಲ್ಲ , ನಾನು ಅಪ್ಪಟ ಕಾಂಗ್ರೆಸ್ಸಿಗ ಎಂದು ಹೇಳಿದ್ದಾರೆ. ಗಿರಿಧರ್ ನಾಯ್ಕ್ ಮತ್ತು ಮಾಜಿ ಶಾಸಕ ಸಂಜೀವ ಮಠಂದೂರು ಸೇರಿದಂತೆ ಬಿಜೆಪಿ ನಾಯಕರ ಮಾತು ಕೇಳಿ ನಾವು ತೊಂದರೆಗೊಳಗಾಗಿದ್ದೇವೆ. ನಮ್ಮ ಪ್ರತಿಭಟನೆಗೆ ಬಿಜೆಪಿಯವರನ್ನು ಕರೆದೇ ಇಲ್ಲ ಅವರೇ ಕರೆಯದೆ ಬಂದು ರಾಜಕೀಯ ಮಾಡಿದ್ದಾರೆ.   ಪ್ರೇಮ, ಬೇಬಿ, ವಿಜಯಲಕ್ಷ್ಮೀ( ಫಲಾನುಭವಿಗಳು)
ಹಕ್ಕು ಪತ್ರ ಕೊಟ್ಟಿದ್ದೇನೆ: ಅಶೋಕ್ ರೈ ೨೦೨೧ ರಲ್ಲಿ ಈ ಬಡಕುಟುಂಬಗಳು ೯೪ ಸಿಗೆ ಅರ್ಜಿ ಹಾಕಿದ್ದಾರೆ ಇವರಿಗೆ ಯಾಕೆ ಆವತ್ತೇ ಹಕ್ಕು ಪತ್ರ ಕೊಟ್ಟಿಲ್ಲ ಈ ಬಿಜೆಪಿಯವರು? ನಾನು ಶಾಸಕನಾದ ಬಳಿಕ ಕಡತ ವಿಲೇವಾರಿ ಮಾಡಿಸಿದ್ದು. ಕೊಡುವಷ್ಟರಲ್ಲಿ ಪ್ರತಿಭಟನೆ ಮಾಡಿದ್ದರು. ಪ್ರತಿಭಟನೆ ಮಾಡಿಸಿ ರಾಜಕೀಯ ಲಾಭ ಪಡೆಯಲು ಬಂದವರು ಈಗ ಎಲ್ಲಿದ್ದಾರೆ? ಬಡವರನ್ನು ಮುಂದಿಟ್ಟು ಇವರದ್ದು ಎಂಥ ನೀಚ ರಾಜಕೀಯ?ಇದು ದೇವರು ಮೆಚ್ಚುವ ಕೆಲಸವಲ್ಲ. ನಾನು ಬಡವರನ್ನು ಮುಂದಿಟ್ಟು ರಾಜಕೀಯ ಮಾಡಲಾರೆ. ನಾನು ಇಂದು ಮೂರು ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ್ದೇನೆ. ಬಡವರ ಕೆಲಸ ಮಾಡಿ ಕೊಟ್ಟ ಬಳಿಕವೂ ಬಿಜೆಪಿಯವರೊಂದಿಗೆ ಸೇರಿ ಪ್ರತಿಭಟನೆ ಮಾಡಿದ್ದು ನನ್ನ ಮನಸ್ಸಿಗೆ ಬೇಸರವಾಗಿತ್ತು. ಬಿಜೆಪಿಯವರು ಮಾಡಿದ ಹಾಗೆ ನಾನು ಎಂದೂ ಮಾಡಲಾರೆ. ಬಡವರ ಮನೆ ಬೆಳಗಬೇಕೆಂಬುದೇ ನನ್ನ ಕನಸು ಹೊರತು ಅವರ ಮುಗ್ದತನವನ್ನು ರಾಜಕೀಯ ಲಾಭಕ್ಕೆ ಬಳಸುವ ಜಾಯಾಮಾನ ನನ್ನದಲ್ಲ   ಅಶೋಕ್ ರೈ, ಶಾಸಕರು
ಕಣ್ಣೀರು ಹಾಕಿದ ಫಲಾನುಭವಿಗಳು ನಾವು ಬಡವರು , ನಮ್ಮನ್ನು ಬಿಜೆಪಿಯವರು ಹಾಗೂ ಗಿರಿಧರ್ ನಾಯ್ಕ್ ಅವರ ಲಾಭಕ್ಕೋಸ್ಕರ ಬಳಸಿಕೊಂಡು ನಮ್ಮನ್ನು ನಾಯಿಂದ ಕಡೆ ಮಾಡಿಬಿಟ್ರು. ಪ್ರತಿಭಟನೆ ಮಾಡಿ ಎಂದವರು ನಮಗೆ ನ್ಯಾಯ ಕೊಡಲಿಲ್ಲ. ನಮಗೂ ಸಂಸಾರ ಇದೆ, ಕುಟುಂಬ ಇದೆ ಎಂಬ ಕನಿಷ್ಠ ಜ್ಞಾನ ಅವರಿಗಿರಬೇಕಿತ್ತು. ನಾವು ಇಷ್ಟರತನಕ ಯಾರನ್ನೂ ಬೈಯ್ದವರಲ್ಲ, ಶಾಸಕರ ತಂದೆಗೆ ಬಿಜೆಪಿಯವರು ಕೆಟ್ಟ ಪಸಗಳಿಂದ ಬೈಯ್ದಿದ್ದಾರೆ ಇದೆಲ್ಲಾ ಒಳ್ಳೆಯದಲ್ಲ. ನಮಗೆ ಈಗ ನ್ಯಾಯ ಸಕ್ಕಿತು. ಶಾಸಕ ಅಶೋಕ್ ರೈ ಅವರ ಬಳಿ ನಾವು ಬಂದು ಮೊದಲೇ ಮಾತನಾಡುತ್ತಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲ ಎಂದು ಮೂವರು ಫಲಾನುಭವಿಗಳು ಕಣ್ಣೀರು ಹಾಕಿದರು.

 

Continue Reading
Click to comment

Leave a Reply

Your email address will not be published. Required fields are marked *

Advertisement