ಪುತ್ತೂರು : ವಿದ್ಯಾ ಭಾರತಿಯ ವತಿಯಿಂದ ಕಲಬುರ್ಗಿಯಲ್ಲಿ ನಡೆದ 2026 ನೇ ಸಾಲಿನ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಚಕ್ರ ಎಸೆತ ಹಾಗೂ ಗುಂಡು ಎಸೆತ ಸ್ಪರ್ಧೆಯಲ್ಲಿ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಆರ್ಯನ್ ಕುಮಾರ್ 9ನೇ ತರಗತಿ (ಬಿಹಾರ ಮೂಲದ ರಾಮ್ ಸಾಗರ್ ಷಾ ಮತ್ತು ಅನಿತಾ ದೇವಿ ದಂಪತಿಯ ಪುತ್ರ) ಪ್ರಥಮ ಸ್ಥಾನ ಪಡೆದು ಮುಂದೆ ಹೈದರಾಬಾದ್ ನಲ್ಲಿ ನಡೆಯುವ ಕ್ಷೇತ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಇವರಿಗೆ ಶಾಲಾ ಅಧ್ಯಕ್ಷರಾದ ಶ್ರೀ ಶಿಬರ ಜಯರಾಮ ಕೆದಿಲಾಯ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರಾದ ಶ್ರೀ ಪ್ರಸನ್ನ ಕೆ ರವರು ಅಭಿನಂದನೆ ಸಲ್ಲಿಸಿದ್ದಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಮಂಜುನಾಥ್,ಶ್ರೀ ಜಯಚಂದ್ರ ಮತ್ತು ಸುದೀಕ್ಷಾರವರು ತರಬೇತು ನೀಡಿರುತ್ತಾರೆ.