Connect with us

ಇತರ

ಬೆಳ್ತಂಗಡಿ : ಆನೆ ಹಾವಳಿ ದೇವರ ಮೊರೆ ಹೋದ ಅರಣ್ಯ ಇಲಾಖೆ ಸೌತಡ್ಕ ಮಹಾ ಗಣಪತಿ ದೇವರಿಗೆ ರಂಗಪೂಜೆ ವಿಶೇಷ ಪ್ರಾರ್ಥನೆ

Published

on

ಕೊಕ್ಕಡ, ಸೆ. 2: ಆನೆಗಳಿಂದ ಸಾರ್ವಜನಿಕ ಜೀವ, ಕೃಷಿ ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯಾಗದಂತೆ ಹಾಗೂ ಆನೆ ಹಾವಳಿ ನಿಯಂತ್ರಣಕ್ಕೆ ಬರಲಿ ಎಂದು ಪ್ರಾರ್ಥಿಸಿ ಅರಣ್ಯ ಇಲಾಖೆಯ ವತಿಯಿಂದ ಕೊಕ್ಕಡ ಸೌತಡ್ಕ ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆ ಸಲ್ಲಿಸಲಾಯಿತು. ಸಾರ್ವಜನಿಕರು ಹಾಗೂ ಕೃಷಿಕರಿಗೆ ಆನೆಗಳಿಂದ ಯಾವುದೇ ರೀತಿಯ ಜೀವಹಾನಿ, ಬೆಳೆ ಹಾಗೂ ಸೊತ್ತು ಹಾನಿ ಸಂಭವಿಸದಂತೆ ಪ್ರಾರ್ಥಿಸಿ ಅರಣ್ಯ ಇಲಾಖೆಯ ಸಿಬ್ಬಂದಿ ವತಿಯಿಂದ ರಂಗಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಆರ್‌ಎಫ್‌ಒ ರಾಘವೇಂದ್ರ, ಡಿಆರ್‌ಎಫ್‌ಒಗಳಾದ ಶಿವಾನಂದ ಆಚಾರ್ಯ, ಯತೀಂದ್ರ, ಸುನೀಲ್, ವಿನಯ್, ಪ್ರವೀಣ್, ಭವಾನಿ ಶಂಕರ ಹಾಗೂ ಹರಿಪ್ರಸಾದ್, ಗಸ್ತು ಅರಣ್ಯಪಾಲಕರಾದ ಸುನೀಲ್ ನಾಯ್ಕ, ನಾಗಲಿಂಗ, ದಿವಾಕರ ರೈ, ದೀಕ್ಷಾ, ಸವಿತಾ, ಶಿವಾನಂದ ಕುದುರಿ ಹಾಗೂ ಸಚಿನ್, ವಾಚರ್ ಸೇಸಪ್ಪ, ಚಾಲಕ ಕಿಶೋರ್ ಹಾಗೂ ಮುಂಡೂರುಪಳಿಕೆ ಶ್ರೀಕೃಷ್ಣ ಕುಮಾರ್ ಭಟ್ ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement