Published
3 years agoon
By
Akkare News
ಪುತ್ತೂರು : ನವಂಬರ್ 13ರಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರ ಸಾರಥ್ಯದಲ್ಲಿ ದೀಪಾವಳಿಯ ಪ್ರಯುಕ್ತ ನಡೆಯುವ ಸೇವಾ ಸೌರಭ ಕಾರ್ಯಕ್ರಮ ಹಾಗೂ ಗೂಡು ದೀಪ ಸ್ಪರ್ಧೆಯ ಪೂರ್ವಭಾವಿ ಸಭೆಯು ಕುರಿಯದಲ್ಲಿ ನಡೆಯಿತು.

ಸಭೆಯಲ್ಲಿ ಸೇವಾ ಸೌರಭ ಕಾರ್ಯಕ್ರಮದ ವಿವರವನ್ನು ಟ್ರಸ್ಟಿನ ಸದಸ್ಯರಾದ ಜಯಪ್ರಕಾಶ್ ಬದಿನಾರು ಇವರು ನೀಡಿದ್ದರು. ಈ ಸಂದರ್ಭದಲ್ಲಿ ಶಿವರಾಂ ಆಳ್ವ, ಸುರೇಂದ್ರ ರೈ, ರಮೇಶ್ ರೈ, ವಿಶ್ವಜಿತ್, ಸನತ್ ರೈ, ರಾಕೇಶ್ ರೈ, ಚಂದ್ರಶೇಖರ ಕಲ್ಲಗುಡ್ಡ, ಬೂತ್ ಕಮಿಟಿಯ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಅಶೋಕ್ ರೈಯವರ ಅಭಿಮಾನಿಗಳು ಭಾಗವಹಿಸಿದರು.