Published
1 year agoon
By
Akkare Newsಪುತ್ತೂರು: ದ 9, ಲಿಟ್ಲ್ ಫ್ಲವರ್ ಶಾಲೆ ದರ್ಬೆ ಪುತ್ತೂರು ಇಲ್ಲಿನ ಬಾಲಕಿಯರ ಕಬಡ್ಡಿ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅಭಿನಂದನಾ ಕಾರ್ಯಕ್ರಮ ನೆರವೇರಿತು. ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತ್ಯದ ಮುಖ್ಯಸ್ಥರ ಸಲಹೆಗಾರರಾಗಿರುವ ವಂದನೀಯ ಭಗಿನಿ. ರೋಶಲ್ ಬಿ ಎಸ್. ಅಧ್ಯಕ್ಷೆತೆ ವಹಿಸಿ ಅಭಿನಂದಿಸಿದರು.ಮುಖ್ಯ ಅತಿಥಿಗಳಾಗಿ ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತ್ಯದ ಲೆಕ್ಕ ಪರಿಶೋಧಕರಾದ ವಂದನೀಯ ಭಗಿನಿ ಸಿಬಿಲ್ ಬಿ ಎಸ್. ಶಾಲಾ ಸಂಚಾಲಕರಾದ ವಂದನೀಯ ಭಗಿನಿ ಪ್ರಶಾಂತಿ ಬಿ ಎಸ್. ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀಮತಿ ಸುನೀತಾ ದಲ್ಮೆದಾ,ಮಾತ್ತೊರ್ವ ಪ್ರಾಯೋಜಕರಾದ ಪ್ರಕಾಶ್ ಡೆಂಟಲ್ ಕ್ಲಿನಿಕ್ ದರ್ಬೆ ಇದರ ದಂತ ವೈದ್ಯರು ಹಾಗೂ ಹಿರಿಯ ವಿದ್ಯಾರ್ಥಿಗಳಾದ ಡಾ. ಶ್ರೀಪ್ರಕಾಶ್. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ರಾಮಚಂದ್ರ ಭಟ್, ಸುರಕ್ಷಾ ಸಮಿತಿ ಅಧ್ಯಕ್ಷರಾದ ಸತೀಶ್ ಆರ್ ಹಾಗೂ ಮುಖ್ಯ ಶಿಕ್ಷಕಿ ವೆನಿಶಾ ಬಿ ಎಸ್ ಉಪಸ್ಥಿತರಿದ್ದರು. ಬಳಿಕ ಕಬಡ್ಡಿ ಆಟಗಾರ್ತಿಯರಾದ ಜುವೆನ್ನಾ ಡ್ಯಾಝಲ್ ಕುಟಿನ್ಹಾ, ಸನ್ನಿಧಿ, ಜೆನಿಟಾ ಸಿಂಧು ಪಸನ್ನ, ಫಾತಿಮತ್ ಶೈಮಾ, ಜೆಸ್ಮಿತಾ, ಹಾರ್ದಿಕ, ನಿಶ್ಮಿತಾ ಮತ್ತು ಕಬಡ್ಡಿ ತರಬೇತುದಾರರಾದ ಸಹ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್, ಮಹಮ್ಮದ್ ಹಬೀಬ್, ಸುಚೇತ್ ದುರ್ಗಾ ನಗರ, ಶಿಲ್ಪಾ ಮರಿಯಾ ಡಿಸೋಜ ಹಾಗೂ ಕಬಡ್ಡಿ ಮಕ್ಕಳಿಗೆ ವಸತಿ ಮತ್ತು ಊಟದ ವ್ಯವಸ್ಥೆ ಮಾಡಿ ಕೊಟ್ಟ ಸಹ ಶಿಕ್ಷಕಿ ವಿಲ್ಮಾ ಫೆರ್ನಾಂಡೀಸ್ ರವರನ್ನು ಸನ್ಮಾನಿಸಕಾಯಿತು. ಬಳಿಕ ಮಂಗಳೂರು ಪ್ರಾಂತ್ಯದ ಮುಖ್ಯಸ್ಥರ ಸಲಹೆಗಾರರಾಗಿರುವ ವಂದನೀಯ ಭಗಿನಿ. ರೋಶಲ್ ಬಿ ಎಸ್ ಹಾಗೂ ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತ್ಯದ ಲೆಕ್ಕ ಪರಿಶೋಧಕರಾದ ವಂದನೀಯ ಭಗಿನಿ ಸಿಬಿಲ್ ಬಿ ಎಸ್ ರವರ ಸನ್ಮಾನಿಸಲಾಯಿತು.ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಸ್ವಾಗತಿಸಿ, ಶಿಕ್ಷಕಿ ಪವಿತ್ರಾ ವಂದಿಸಿ. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.