Published
1 year agoon
By
Akkare Newsಸುಳ್ಯ: ಶ್ರೀರಾಮಚಂದ್ರನ ಅಯೋಧ್ಯೆ ರಾಮಮಂದಿರ ಲೋಕಾಪರ್ಣೆ ಬ್ಯಾನರನ್ನು ಯಾರೋ ಹರಿದಾಕಿರುವ ಕುರಿತು ವರದಿಯಾಗಿದೆ.ಸುಳ್ಯದ ಮುಖ್ಯರಸ್ತೆಯಲ್ಲಿ ಸುಳ್ಯ ಜಾತ್ರೆ ಹಾಗೂ ಅಯೋಧ್ಯೆ ರಾಮಮಂದಿರ ಮತ್ತು ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ಬಿಎಂಎಸ್‌ನ ಬೆಳ್ಳಿ ಹಬ್ಬಕ್ಕೆ ಶುಭಕೋರಿ ಬೃಹತ್ ಬ್ಯಾನರನ್ನು ಹಾಕಲಾಗಿತ್ತು.
ಮಧ್ಯದಲ್ಲಿದ್ದ ಶ್ರೀರಾಮ ದೇವರ ಸಹಿತ ರಾಮಮಂದಿರ ಲೋಕಾಪರ್ಣೆ ವಿಷಯದ ಬ್ಯಾನರ್ ನ್ನು ರಾತ್ರಿ ವೇಳೆ ಯಾರೋ ಹರಿದ ಹಾಕಿರುವ ಕುರಿತು ವರದಿಯಾಗಿದೆ.ಈ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ದ.ಕ. ಎಸ್.ಪಿ ಜೊತೆ ಫೋನ್ ಮೂಲಕ ಮಾತನಾಡಿರುವ ಕುರಿತು ವರದಿಯಾಗಿದೆ.ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.