Published
10 months agoon
By
Akkare Newsಉಡುಪಿ : ಫೆ.17 ಮೀನುಗಾರ ಮುಖಂಡರು ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ ವಿರುದ್ಧ ಕೆಂಡಾಮಂಡಲಗೊಂಡ ಘಟನೆ ಇಂದು ನಡೆದಿದೆ.ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆಯವರಿಗೆ ಮೀನುಗಾರ ಮುಖಂಡರು ನಿಮಗೆ ಹತ್ತು ವರ್ಷಗಳಿಂದ ಮತ ಹಾಕಿದ್ದಕ್ಕೆ ನೀವು ನಮಗೇನು ಮಾಡಿದ್ರಿ ಎಂದು ನೇರವಾಗಿ ಪ್ರಶ್ನೆ ಮಾಡಿದರು.
ಈ ಸಂದರ್ಭದಲ್ಲಿ ಮೀನುಗಾರರ ಮೇಲೆಯೇ ಸಚಿವೆ ಹಾರಿಹಾಯ್ದರು ಬಳಿಕ ಮೀನುಗಾರ ಮುಖಂಡರು ಮತ್ತು ಸಚಿವೆ ಮಧ್ಯೆ ವಾಗ್ವಾದ ನಡೆಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಕಕ್ಕಾಬಿಕ್ಕಿಯಾದರು.