Published
9 months agoon
By
Akkare Newsಮಂಗಳೂರು: ಭಾರತ ಚುನಾವಣಾ ಆಯೋಗವು ಲೋಕಸಭಾ ಚುನಾವಣೆ-2024ಕ್ಕೆ ಸಂಬಂಧಿಸಿ ದಿನಾಂಕ: 16-03-2024 ರಿಂದ ಜಾರಿಗೆ ಬರುವಂತೆ ಚುನಾವಣಾ ನೀತಿ ಸಂಹಿತೆಯನ್ನು ಜಾರಿಗೊಳಿಸಿ ಕರ್ನಾಟಕ ರಾಜ್ಯದಲ್ಲಿ ದಿನಾಂಕ: 26-04-2024 ರಂದು ಮತ್ತು 07-05-2024 ರಂದು ಎರಡು ಹಂತದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ 2024 ನ್ನು ನಡೆಸಲು ದಿನಾಂಕವನ್ನು ಘೋಷಿಸಲಾಗಿದೆ.
ಈ ಹಿನ್ನಲೆ ಪರವಾನಿಗೆ ಪಡೆದ ಅಯುಧ ಪರವಾನಿಗೆದಾರರ ಕುರಿತು ಪೂರ್ವಭಾವಿ ಪರಿಶೀಲನೆಯನ್ನು ನಡೆಸಿ ಚುನಾವಣೆಯ ಅವಧಿಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ಪರವಾನಗಿ ಪಡೆದ ಆಯುಧಗಳನ್ನು ಅಮಾನತ್ತಿನಲ್ಲಿ ಇರಿಸುವುದು ಅವಶ್ಯವೆಂದು ಕಂಡುಬಂದಲ್ಲಿ ಸೂಕ್ತ ಆದೇಶವನ್ನು ಹೊರಡಿಸುವಂತೆ ಸೂಚನೆ ನೀಡಲಾಗಿದ್ದು,
ಪ್ರತಿಯೊಬ್ಬ ಆಯುಧ ಪರವಾನಗಿದಾರನ ಪೂರ್ವಭಾವಿ ಪರಿಶೀಲನೆಯನ್ನು ಕನಿಷ್ಟ ಅವಧಿಯಲ್ಲಿ ಪರಿಶೀಲಿಸಿ ಆದೇಶ ಹೊರಡಿಸುವುದು ಅಸಾಧ್ಯವಾದ ಕಾರಣ ಸಾರ್ವಜನಿಕ ಸುರಕ್ಷತೆಯ ಹಾಗೂ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಯನ್ನು ನಡೆಸುವ ಉದ್ದೇಶದಿಂದ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಗೆ ಒಳಪಡುವ ಪರವಾನ ಹೊಂದಿರುವ ಎಲ್ಲಾ ಆಯುಧ ಪರವಾನಿಗಳನ್ನು ಶಸ್ತ್ರಾಸ್ತ್ರ ಕಾಯ್ದೆ 1959 ಕಲಂ 17(3)(ಬಿ) ರನ್ವಯ ಹಾಗೂ ಉಲ್ಲೇಖ (4) ರ ನಿಷೇದಾಜ್ಞೆಯ ಆದೇಶದಂತೆ ತಾತ್ಕಾಲಿಕ ಅವಧಿಗೆ ಅಮಾನತಿನಲ್ಲಿರಿಸುವುದು ಸೂಕ್ತವೆಂದು ಹಾಗೂ ಸದರಿ ಅವಧಿಯಲ್ಲಿ ಪರವಾನಿಗೆಯಲ್ಲಿ ಹೊಂದಿರುವ ಎಲ್ಲಾ ಆಯುಧಗಳನ್ನು ಠೇವಣಿಯಲ್ಲಿರಿಸಬೇಕೆಂದು ಮಂಗಳೂರು ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.