Published
9 months agoon
By
Akkare Newsದ.ಕ.ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಸಮೀಪದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಿದೆ ಎಂದು ವರದಿಯಾಗಿದೆ. ಹೌದು. ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿರುವುದಾಗಿ ವರದಿಯಾಗಿದೆ.
ನಿನ್ನೆ ಸಂಜೆ (ಶನಿವಾರ) ಮಳೆ ಬರುತ್ತಿದ್ದ ಸಮಯದಲ್ಲಿ ಸಂಜೆ ಆರು ಗಂಟೆ ಸುಮಾರಿಗೆ ನಕ್ಸಲರು ಭೇಟಿ ನೀಡಿದ್ದು, ಮೂವರು ತಂಡದಲ್ಲಿ ಇದ್ದಿದ್ದು, ಐನೆಕಿದು ಗ್ರಾಮದ ಅಶೋಕ್ ಎಂಬುವವರ ಮನೆಗೆ ಭೇಟಿ ನೀಡಿರುವುದಾಗಿ ವರದಿಯೊಂದು ತಿಳಿಸಿದೆ.
ಇವರು ಒಂದು ಗಂಟೆಗೂ ಹೆಚ್ಚು ಕಾಲ ಮನೆಯವರ ಜೊತೆ ಮಾತುಕತೆ ನಡೆಸಿ ವಾಪಸ್ ತೆರಳಿದ್ದಾರೆ ಎಂದು ಹೇಳಲಾಗಿದೆ. ಮಳೆ ಬರುತ್ತಿದ್ದ ಕಾರಣ ಶಂಕಿತ ನಕ್ಸಲರು ಮೊಬೈಲ್ ಚಾರ್ಜ್ ಮಾಡಿ ಅಲ್ಲಿಂದ ಹೋಗಿರುವುದಾಗಿ ಹೇಳಲಾಗಿದೆ. ಇವರ ಬಳಿ ಶಸ್ತ್ರಾಸ್ತ್ರ ಇತ್ತು ಎಂಬ ಮಾತು ಕೂಡಾ ಕೇಳಿ ಬಂದಿದೆ.