Published
9 months agoon
By
Akkare Newsಬಂಪರ್ ಲಾಟರಿ :10 ಕೋಟಿ ರೂ. ಲಾಟರಿ ಗೆದ್ದು, ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಆಟೋ ಚಾಲಕ
ಅದೃಷ್ಟ ಯಾವಾಗ ಯಾರಿಗೆ ಒಲಿಯುತ್ತದೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಜೀವನ ನಡೆಸಲು ಹೆಣಗಾಡುವ ಜನರು ರಾತ್ರೋರಾತ್ರಿ ಫೇಮಸ್ ಆಗುತ್ತಾರೆ. ಅದೃಷ್ಟ ಲಕ್ಷ್ಮಿ ಯಾವುದೋ ಒಂದು ರೂಪದಲ್ಲಿ ಅವರ ಕೈ ಹಿಡಿಯುತ್ತಾಳೆ.
ಕೇರಳದ ಆಟೋ ಚಾಲಕರೊಬ್ಬರು ನಿನ್ನೆ ರಾತ್ರಿಯಷ್ಟೇ (ಬುಧವಾರ )ಲಾಟರಿ ಟಿಕೆಟ್ ಖರೀದಿ ಮಾಡಿದ್ದು, ಗುರುವಾರ ಬೆಳಗ್ಗೆ ಲಾಟರಿಯಲ್ಲಿ ಪ್ರಥಮ ಬಹುಮಾನ 10 ಕೋಟಿ ರೂ. ಗೆದ್ದು ಕೋಟ್ಯಾಧಿಪತಿಯಾಗಿದ್ದಾರೆ.
ಕೇರಳದ ಕಾರ್ತಿಕಪುರದ ರಾಜರಾಜೇಶ್ವರಿ ಲಾಟರಿ ಏಜನ್ಸಿಯಿಂದ ನಾಸರ್ ಲಾಟರಿ ಟಿಕೆಟ್ ಖರೀಸಿದ್ದರು. ಅವರ ಅದೃಷ್ಟ ಖುಲಾಯಿಸಿ ಈ ಲಾಟರಿಯಲ್ಲಿ ಪ್ರಥಮ ಬಹುಮಾನ 10 ಕೋಟಿ ರೂ. ಹಣ ಗೆದ್ದಿದ್ದಾರೆ.
ಕಾರ್ತಿಕಪುರದಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುವ ನಾಸರ್ ನಿನ್ನೆ ರಾತ್ರಿಯಷ್ಟೇ ಲಾಟರಿ ಟಿಕೆಟ್ ಖರೀದಿಸಿದ್ದರು ಎಂದು ಲಾಟರಿ ಏಜೆಂಟ್ ರಾಜು ತಿಳಿಸಿದ್ದಾರೆ. ಟಿಕೆಟ್ ಖರೀದಿಸಿದ ಒಂದೇ ರಾತ್ರಿಯಲ್ಲಿ ನಾಸಿರ್ ಈಗ ಕೋಟ್ಯಾಧಿಪತಿಯಾಗಿದ್ದಾರೆ.
ಕೇರಳದ ಕಣ್ಣೂರಿನ ಆಳಕೋಡ್ ನಿವಾಸಿ ನಾಸರ್ 10 ಕೋಟಿ ರೂ. ಬಂಪರ್ ಲಾಟರಿ ಗೆದ್ದ ವ್ಯಕ್ತಿ.