Published
9 months agoon
By
Akkare Newsಸುಬ್ರಹ್ಮಣ್ಯ/ಪಂಜ: ಪಂಜದ ಡಬಲ್ ಕಟ್ಟೆಯಲ್ಲಿ ಹಾಡುಹಗಲೇ ಮನೆಗೆ ನುಗ್ಗಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಚೈನ್ ಎಳೆದೊಯ್ದ ಪ್ರಕರಣವನ್ನು ಸುಬ್ರಹ್ಮಣ್ಯ ಪೊಲೀಸರು ಪತ್ತೆ ಹಚ್ವಿದ್ದಾರೆ.
ಮಾ.4 ರಂದು ಪಂಜ ಸಮೀಪದ ಪಂಬೆತ್ತಾಡಿ ಗ್ರಾಮದ ಡಬಲ್ ಕಟ್ಟೆ ಸೀತಮ್ಮ ಎಂಬವರು ಮನೆಗೆ ಬಾಗಿಲು ಹಾಕಿ ಪಕ್ಕದ ಮನೆಗೆ ಹೋಗಿದ್ದರು. ಇದೇ ವೇಳೆ ಆಕೆಯ ಮನೆಯೊಳಗೆ ಸದ್ದು ಕೇಳಿತ್ತೆಂದು ಮನೆಗೆ ಹಿಂದಿರುಗಿ ಬಂದಾಗ ಇಬ್ಬರು ಕಳ್ಳರು ಮನೆಯೊಳಗೆ ಹಿಂದಿನ ಬಾಗಿಲಿನಿಂದ ನುಗ್ಗಿರುವುದಾಗಿ ಹೇಳಲಾಗಿತ್ತು.
ಇದೇ ವೇಳೆ ಅಪರಿಚಿತರು ಜೀವ ಬೆದರಿಕೆ ಒಡ್ಡಿ ಮಹಿಳೆಯನ್ನು ತಳ್ಳಿ ಹಾಕಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಕಿತ್ತು ಬೈಕಿನಲ್ಲಿ ಪರಾರಿಯಾಗಿದ್ದರು.
ಇದೀಗ ಪೊಲೀಸರು ಕಳ್ಳತನ ಮಾಡಿರುವ ಚಿತ್ರದುರ್ಗ ಹಾಗೂ ಬೇಲೂರು ಮೂಲದ ಆರೋಪಿಗಳನ್ನು ದಸ್ತಗಿರಿ ಮಾಡಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.