ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಕುರಿಯ ಮಲಾರ್‌: ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ತಂಡವೊಂದರಿಂದ ಯುವಕನಿಗೆ ಹಲ್ಲೆ

Published

on

ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ತಂಡವೊಂದು ಯುವಕನಿಗೆ ಹಲ್ಲೆ ಮಾಡಿದ ಘಟನೆಯೊಂದು ಕುರಿಯ ಮಲಾರ್‌ ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಗೆ ಅಶ್ವಿತ್‌ ಕುಮಾರ್‌ ದೂರು ನೀಡಿದ್ದಾರೆ.

ಏ.3 ರಂದು ಕುರಿಯ ಗ್ರಾಮದ ಮಲಾರ್‌ನಲ್ಲಿ ಇದ್ದ ಸಂದರ್ಭದಲ್ಲಿ ಪರಿಚಯದ ಸಚಿನ್‌ ಮುಕ್ವೆ ಎಂಬಾತ ಕರೆ ಮಾಡಿದ್ದು, ನಿನ್ನಲ್ಲಿ ಮಾತನಾಡಲು ಇದೆ ಎಂದು ತಿಳಿಸಿದ್ದು, ನಂತರ ಮಲಾರ್‌ನಲ್ಲಿರುವುದಾಗಿಯೂ, ದರ್ಬೆಗೆ ಬರುವುದಾಗಿ ತಿಳಿಸಿದ್ದು, ನಂತರ ಬೈಕ್‌ನಲ್ಲಿ ಹೊರಟು ಆರ್ಯಾಪು ಗ್ರಾಮದ ಕಲ್ಲರ್ಪೆಯ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಸಚಿನ್‌ ಮುಕ್ವೆ ಹಾಗೂ ಇತರರು ಕಾರಿನಲ್ಲಿ ದರ್ಬೆ ಕಡೆಯಿಂದ ಬರುತ್ತಿದ್ದು, ಅಶ್ವಿತ್‌ ಕುಮಾರ್‌ ನನ್ನು ನೋಡಿ,




ಅಡ್ಡಗಟ್ಟಿ ತಡೆದು, ಕಾರಿನಿಂದ ಇಳಿದು ಬಂದು, ಅಶ್ವಿತ್‌ ಕುಮಾರ್‌ ಮತ್ತು ಯುವತಿ ಮಧ್ಯೆ ಇರುವ ಪ್ರೀತಿ ವಿಚಾರದ ಕುರಿತು ಹೇಳಿದ್ದು, ಆಕೆಯ ವಿಚಾರಕ್ಕೆ ಬಂದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾಗಿಯೂ, ಹಾಗೂ ಸಚಿನ್‌, ಅಂಕಿತ್‌ ಕೈಯಿಂದ ಹೊಡೆದಿರುವುದಾಗಿಯೂ, ಜೊತೆಗೆ ಪರಿಚಯ ಇಲ್ಲದ ವ್ಯಕ್ತಿಗಳು ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಅಶ್ವಿತ್‌ ಅವರಿಂದ ತಪ್ಪಿಸಲೆಂದು ಓಡಿದಾಗ, ಮುಂದಕ್ಕೆ ಹುಡುಗಿಯ ವಿಷಯಕ್ಕೆ ಬಂದರೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಅಶ್ವಿತ್‌ ಕುಮಾರ್‌ ಆರೋಪ ಮಾಡಿದ್ದಾರೆ.

ಈ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಕಲಂ 143, 147, 504, 341, 323, 506, 149 ಐಪಿಸಿಯಂತೆ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version