ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಭಯಾನಕ ಉರಿ ಬಿಸಿಲಿಗೆ ರಾಜ್ಯ ತತ್ತರ, ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲೂ ತಾಪಮಾನ ದಿನದಿಂದ ದಿನಕ್ಕೆ ಏರಿಕೆ

Published

on

ಪುತ್ತೂರು : ಭಯಾನಕ ಉರಿ ಬಿಸಿಲಿಗೆ ರಾಜ್ಯ ತತ್ತರಿಸಿದ್ದು, ಜೀವ ಸಂಕುಲ ಕುಡಿಯುವ ನೀರಿಲ್ಲದೆ ತ್ತರಿಸುತ್ತಿದೆ. ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲೂ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದ್ದು ಜನ ಹೈರಾಣಾಗಿದ್ದಾರೆ. ಎಪ್ರಿಲ್ 4 ರಿಂದ 5ರ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ 39.9 ಡಿಗ್ರಿ ಸೆಲ್ಸಿಯಸ್ .ಉಡುಪಿ ಜಿಲ್ಲೆಯ ಅಜೆಕಾರಿನಲ್ಲಿ 39.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿ ದಾಖಲೆಯ ಉಷ್ಣಾಂಶ ಇದಾಗಿದೆ. ಕಳೆದ ಕೆಲವು ದಿನಗಳಿಂದ ಗರಿಷ್ಠ ತಾಪಮಾನ ಏರಿಕೆ ಕಾಣುತ್ತಿದೆ. ಜಿಲ್ಲೆಯಲ್ಲಿ ವಾಡಿಕೆಗಿಂತ 1 ರಿಂದ 2 ಡಿ.ಸೆ.

ತಾಪಮಾನ ಏರಿಕೆ ಕಾಣುತ್ತಿದೆ. ಕೆಲವು ಕಡೆಗಳಲ್ಲಿ ಸರಾಸರಿ 35ರಿಂದ 36 ಡಿ.ಸೆ. ಉಷ್ಣಾಂಶ ದಾಖಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.ಇನ್ನು ಬಿಸಿಲ ಬೇಗೆಯಿಂದ ತಪ್ಪಿಸಲು ದ.ಕ.

ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದಿಂದ ಸಾರ್ವಜನಿಕರಿಗೆ ಕೆಲವೊಂದು ಸೂಚನೆಗಳನ್ನು ಪ್ರಕಟಿಸಿದೆ. ಅದರಂತೆ ಆಯಾಸವಾದಾಗ ಮಾತ್ರವಲ್ಲ, ಆಗಾಗ ನೀರು ಕುಡಿಯುತ್ತಲೇ ಇರಬೇಕು, ನೀರಿನಂತಿರುವ ಕಲ್ಲಂಗಡಿ, ಕಿತ್ತಳೆ, ಮೂಸಂಬಿ, ದ್ರಾಕ್ಷಿ, ಅನಾನಸ್‌ ಹಣ್ಣುಗಳನ್ನು ಸೇವಿಸಿ ಎಂದು ತಿಳಿಸಿದೆ. ನೀರಿನ ಅಂಶವುಳ್ಳ ಆಹಾರಗಳನ್ನು ಸೇವನೆ ಮಾಡಿ, ಮನೆಯಿಂದ ಹೊರಗಡೆ ಕಾಲಿಡುವಾಗ ತಲೆಗೆ ಕ್ಯಾಪ್‌ ಧರಿಸುವುದು ಒಳ್ಳೆಯದು, ಬೇಸಿಗೆ ಸಮಯದಲ್ಲಿ ಸಡಿಲ ಉಡುಪುಗಳನ್ನು ಧರಿಸುವುದು ಸೂಕ್ತ, ಬಿಸಿಲಿಗೆ ಬರಿಗಾಲಿನಲ್ಲಿ ನಡೆಯುವುದನ್ನು ನಿಲ್ಲಿಸಿ, ಚಪ್ಪಲಿ ಅಥವಾ ಶೂ ಧರಿಸಿ ಎಂದು ಹೇಳಲಾಗಿದೆ.





ಮಕ್ಕಳ ಆರೋಗ್ಯದ ಮೇಲೆ ಬೇಸಿಗೆಯ ಹವಾಮಾನ ಪರಿಣಾಮ ಬೀರದಂತೆ ಜಾಗ್ರತೆ ವಹಿಸಬೇಕು. ಮಕ್ಕಳಲ್ಲಿ ನಿರ್ಜಲೀಕರಣ ತಪ್ಪಿಸಲು ಪ್ರತೀ ದಿನ 2ರಿಂದ 3 ಲೀಟರ್‌ ನೀರನ್ನು ಆಯಾ ವಯಸ್ಸಿಗೆ ಅನುಗುಣವಾಗಿ ನೀಡಬೇಕು. ನಲ್ಲಿ ಜ್ವರ, ಶೀತ, ತಲೆನೋವು, ಬೊಕ್ಕೆಗಳು ಕಾಣಿಸಿಕೊಂಡಲ್ಲಿ ನುರಿತ ವೈದ್ಯರನ್ನು ಸಂಪರ್ಕಿಸಿ ಎಂದು ತಿಳಿಸಲಾಗಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version