Published
8 months agoon
By
Akkare Newsಮಂಗಳೂರಿನಲ್ಲಿ ಭಾನುವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಮುಗಿದ ಬಳಿಕ ಯುವಕನೋರ್ವನಿಗೆ ಗೂಸಾ ಬಿದ್ದ ಬಗ್ಗೆ ವರದಿಯಾಗಿದೆ.
ಪ್ರಧಾನಿ ಮೋದಿ ರೋಡ್ ಶೋ ವೀಕ್ಷಿಸಲು ಬಂದಿದ್ದ ಮಹಿಳೆಯೊಬ್ಬಳಿಗೆ ಯುವಕನೋರ್ವ ಮೊಬೈಲ್ ನಂಬರ್ ನೀಡಿದ್ದೇ ಗಲಾಟೆಗೆ ಕಾರಣವಾಗಿದೆ.ನಗರದ ಬಂಟ್ಸ್ ಹಾಸ್ಟೆಲ್ ಬಳಿ ಮೋದಿ ರೋಡ್ ಶೋ ಗೆ ಬಂದಿದ್ದ ಮಹಿಳೆಗೆ ಯುವಕನೋರ್ವ ಚೀಟಿಯಲ್ಲಿ ತನ್ನ ಮೊಬೈಲ್ ನಂಬರ್ ಬರೆದು ರವಾನಿಸಿದ್ದ. ಕೂಡಲೇ ಮಹಿಳೆ ತನ್ನ ಪತಿಗೆ ವಿಷಯ ಮುಟ್ಟಿಸಿದ್ದಾಳೆ.
ಆರೋಪಿ ಯುವಕನನ್ನು ಹಿಡಿದ ಮಹಿಳೆಯ ಪತಿ ಮತ್ತು ಸಾರ್ವಜನಿಕರು ಆತನ ಮೊಬೈಲ್ ಕಿತ್ತುಕೊಂಡು ಧರ್ಮದೇಟು ನೀಡಿ ಯುವಕನ ಚಳಿ ಬಿಡಿಸಿದ್ದಾರೆ. ಬಳಿಕ ಸ್ಥಳದಲ್ಲಿದ್ದ ಇತರ ಸಾರ್ವಜನಿಕರು ಪರಿಸ್ಥಿತಿ ತಿಳಿಗೊಳಿಸಿದ್ದು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. .