ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಬಿರುವೆರೆ ಕುಡ್ಲ ಸಂಸ್ಥಾಪಕ ಉದಯ ಪೂಜಾರಿಯವರನ್ನು ಕಡೆಗಣಿಸಿದ ಬಿಜೆಪಿ.!! ಬಿಜೆಪಿ ಗೆ ತಿರುಗಿ ಬೀಳುತಿರುವ ಸಂಘಟನೆ.???

Published

on

ಮಂಗಳೂರಿನಲ್ಲಿ ನಡೆದ ದೇಶದ ಪ್ರಧಾನಿಯವರ ರೋಡ್‌ ಶೋ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ಕೈಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಗೆ ಮಾಲೆ‌ ಹಾಕಿಸುವ ಮೂಲಕ ಬಿಲ್ಲವರ ಓಲೈಕೆ ಮಾಡ ಹೊರಟ ಬ್ರಿಜೇಷ್ ಚೌಟರು, ಅಲ್ಲಿ‌ ನಾರಾಯಣ ಗುರುಗಳ ವೃತ್ತ ಆಗುವ ಸಂದರ್ಭದಲ್ಲಿ ಎಲ್ಲಿ ಅವಿತು‌ ಕೂತಿದ್ದರು? ಅದೆಷ್ಟೋ ಒತ್ತಡ ಮತ್ತು ಸಮಸ್ಯೆಗಳನ್ನು ಎದುರಿಸಿ ಕೊನೆಗೂ‌ ಅಲ್ಲಿ ವೃತ್ತ‌ ನಿರ್ಮಾಣ ಆಗುವಂತೆ ಹಗಲು ರಾತ್ರಿ ದುಡಿದ‌‌ ಜಿಲ್ಲೆಯ ಪ್ರಮುಖ ಸಂಘಟನೆಯಾದ ಬಿರುವೆರ್ ಕುಡ್ಲ(ರಿ) ಸ್ಥಾಪಕರಾದ ಉದಯಣ್ಣನ್ನು ಕಡೆಗಣಿಸಿ, ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಷ್ಟು ಸೌಜನ್ಯವನ್ನೂ ಇಟ್ಟುಕೊಳ್ಳದ‌ ಬಿಜೆಪಿ‌,‌ ಅವರ ಶ್ರಮಕ್ಕೆ‌ ಬೆಲೆಕೊಡದೆ, ತನ್ನ ಬೇಳೆ ಬೇಯಿಸಿಕೊಳ್ಳುತ್ತಿರುವುದು ನಾಚಿಕೆಕೇಡು.

ಪಕ್ಷಕ್ಕಾಗಿ ಎಲ್ಲವನ್ನೂ ಎದುರು ಹಾಕಿಕೊಂಡು, ತನ್ನ‌ ಸಂಘಟನೆಯ ಬಗ್ಗೆಯೂ ಯೋಚಿಸದೆ, ಅಂದು ಬೆಳ್ತಂಗಡಿಯಲ್ಲಿ ಪೂಂಜರ ಪರ‌ ನಿಂತು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡ ಉದಯಣ್ಣ ಇಂದು ಇವರಿಗೆ ಬೇಡವಾಯಿತೇ? ತಮ್ಮ ಕಾರ್ಯಸಾಧನೆಗೆ ಕಾರ್ಯಕರ್ತರನ್ನು ನಾಯಕರನ್ನು ಉಪಯೋಗಿಸಿಕೊಂಡು ಬೇಡವಾದಾಗ ಕಡೆಗಣಿಸುವ ನೀಚ ಬುದ್ಧಿಯನ್ನು ಬಿಜೆಪಿ ಮತ್ತೆ‌‌ ಉದಯ ಪೂಜಾರಿ ಅವರ ವಿಷಯದಲ್ಲಿ ತೋರಿಸುತ್ತಿದೆ.

ವೃತ್ತ‌ ನಿರ್ಮಾಣದ ಸಂದರ್ಭದಲ್ಲಿ ಇತ್ತ ಕಡೆ ಸೋಕಿ‌ಯೂ ನೋಡದ ಬ್ರಿಜೇಶ್ ಚೌಟನಿಗೆ ಚುನಾವಣಾ ಸಂದರ್ಭದಲ್ಲಿ ನಾರಾಯಣ ಗುರುಗಳ ಮೇಲೆ ಭಕ್ತಿ ಅಭಿಮಾನ ಜಾಸ್ತಿಯಾಗಿದ್ದು ಮೆಚ್ಚಲೇ ಬೇಕು. ಇವರಿಗೆ ಗುರುಗಳ ಮೇಲೆ ಅಷ್ಟೊಂದು ಭಕ್ತಿ – ಅಭಿಮಾನ ಇದ್ದಿದ್ದರೆ ಕನಿಷ್ಠ ಪಕ್ಷ ಅಭ್ಯರ್ಥಿಯಾಗಿ ಆಯ್ಕೆ ಆಗುವ ಸಂದರ್ಭದಲ್ಲಿ ಅಥವಾ ನಾಮ ಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಗುರುಗಳ ಸಾನಿಧ್ಯಕ್ಕೆ ಬೇಟಿ ನೀಡಬೇಕಿತ್ತು.

ಅದ್ಯಾವುದನ್ನೂ ಮಾಡದೆ ಈಗ ಚುನಾವಣಾ ಸಂದರ್ಭದಲ್ಲಿ ‌ಒಂದು ಸಮುದಾಯವನ್ನು ಓಲೈಸಲು ಪ್ರಧಾನಿಯವರನ್ನು ಕರೆದು ತಮ್ಮ ಆಂದಾಭಿಮಾನ ತೋರಿಸಿ‌ ಗುರುಗಳಿಗೆ ಅಪಮಾನ ಮಾಡುತ್ತಿದ್ದಾರೆ.







ಇಂದು ಅಲ್ಲಿ ವೃತ್ತ ನಿರ್ಮಾಣ ಆಗಬೇಕಿದ್ದರೆ ಅದಕ್ಕೆ‌‌ ಮೂಲ ಕಾರಣ‌‌ ಉದಯ ಪೂಜಾರಿ ಅವರು. ಅದೆಷ್ಟೋ ಬಡ ಕುಟುಂಬಗಳಿಗೆ ಜಾತಿ ಮತ ನೋಡದೆ, ಇವತ್ತಿನವರೆಗೂ ಆರ್ಥಿಕ‌ ನೆರವು ನೀಡುತ್ತಾ‌ ಬಂದಿರುವ ಇವರ ಸಂಸ್ಥೆಗೆ ಮತ್ತು ಇವರಿಗೆ ಜಿಲ್ಲೆಯಲ್ಲಿ ಒಂದು ಗೌರವದ ಸ್ಥಾನವಿದೆ. ಅದ್ಯಾವುದನ್ನೂ ಲೆಕ್ಕಿಸದೆ ಅವರ ಶತ ಪ್ರಯತ್ನದಿಂದ ನಿರ್ಮಾಣವಾದ ಗುರುಗಳ‌ ಪ್ರತಿಮೆ‌ ಇರುವ ವೃತ್ತವನ್ನು ಇವರ ಸ್ವಾರ್ಥಕ್ಕೆ ಬಳಸಿಕೊಳ್ಳಲು ಇವರಿಗೆ ನಾಚಿಕೆಯಾಗುವುದಿಲ್ಲವೆ? ಒಂದು ವೇಳೆ ಅಲ್ಲಿ ವೃತ್ತ ಇಲ್ಲದೇ‌ ಹೋಗಿದ್ದರೆ, ಇವರಿಗೆ ಗುರುಗಳ‌ ಮುಖ್ಯ ಕ್ಷೇತ್ರವಾದ ಕುದ್ರೋಳಿಗೆ ಹೋಗುವಷ್ಟು ಧೈರ್ಯ ‌ಇತ್ತೇ? ಪ್ರತೀ ಭಾರಿಯೂ ಬಿಲ್ಲವರನ್ನು ಓಲೈಸಲು ಬಿಲ್ಲವ‌ ಧಾರ್ಮಿಕ ವಿಷಯಗಳನ್ನೇ‌ ಬಳಸಿ ಗಿಮಿಕ್ ಮಾಡುತ್ತಿರುವ ಬಿಜೆಪಿಯಿಂದ ಬಿಲ್ಲವ ಸಮಾಜ ಯಾವ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಕು???????

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version