ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಲೋಕಸಭಾ ಚುನಾವಣೆ ; ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದ ಕಾಂಗ್ರೆಸ್ ಪಕ್ಷ ರೈತರ ಸಾಲ ಮನ್ನಾ, ಗೃಹಲಕ್ಷ್ಮಿ ಹಣದ ಒಟ್ಟಿಗೆ ಒಂದು ಲಕ್ಷ, ಮಹಿಳೆಯರಿಗೆ ವರ್ಷಕ್ಕೆ 1.24 ಲಕ್ಷ ನುಡಿದಂತೆ ನಡೆದಿದ್ದೇವೆ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ : ರಾಹುಲ್ ಗಾಂಧಿ

Published

on

ಈ ಸಲದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸದ್ಯ ರಾಜ್ಯ ಸರ್ಕಾರ ನೀಡುತ್ತಿರುವ ಗೃಹಲಕ್ಷ್ಮೀ ದುಡ್ಡಿನ 24 ಸಾವಿರಕ್ಕೆ 1 ಲಕ್ಷ ರೂ. ಸೇರಿಸಿ 1 ಲಕ್ಷದ 24 ಸಾವಿರ ರೂಪಾಯಿ ನೀಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರು ಬುಧವಾರ ಭರವಸೆ ನೀಡಿದ್ದಾರೆ.

ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಮತ ಬೇಟೆಗೆಂದು ಆಗಮಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಂಡ್ಯ ಹಾಗೂ ಕೋಲಾರ ಜಿಲ್ಲೆಯ ಕಾಂಗ್ರೆಸ್ ಪ್ರಜಾಧ್ವನಿ- 0.2 ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು ರಾಜ್ಯದ 24 ಸಾವಿರದ ಜೊತೆಗೆ ಕೇಂದ್ರದಿಂದ ವರ್ಷಕ್ಕೆ 1.24 ಲಕ್ಷ ರೂ. ಹಣವನ್ನು ಮಹಿಳೆಯರ ಖಾತೆಗೆ ಜಮೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ.

ರೈತರ ಸಾಲ ಮನ್ನಾ, ಕನಿಷ್ಠ ಬೆಂಬಲ ಬೆಲೆ ಪಕ್ಕಾ !!
ಮಹಿಳೆಯರಿಗೆ ಭರ್ಜರಿ ಘೋಷಣೆ ಮಾಡಿದ ರಾಹುಲ್ ಅವರು ರೈತರಿಗೂ ಗುಡ್ ನ್ಯೂಸ್ ಕೊಟ್ಟಿದ್ದು ರೈತರ ಸಾಲಮನ್ನಾ, ಕನಿಷ್ಠ ಬೆಂಬಲ ಬೆಲೆಯ ಗ್ಯಾ



ರಂಟಿಯನ್ನು ಕೂಡ ನೀಡಿದ್ದಾರೆ.







ರಾಹುಲ್ ಗಾಂಧಿ ಘೋಷಿಸಿದ ಇತರ ಘೋಷಣೆಗಳು :
• ಯುವಕರಿಗೆ ಐತಿಹಾಸಿಕ ಕಾರ್ಯಕ್ರಮ.
• ಮೊದಲು ಉದ್ಯೋಗ ಯೋಜನೆ ಜಾರಿ.
• ಬಡವರ ಮಕ್ಕಳು ದೊಡ್ಡ ಕಾರ್ಖನೆಗಳಲ್ಲಿ ಅಪ್ರಂಟಿಶಿಪ್ ಮಾಡಿ ಕೆಲಸ ಕೊಡುವ ಕೆಲಸ.
• ನರೇಗಾ ಯೋಜನೆಯನ್ನ ನಗರ ಪ್ರದೇಶಕ್ಕೆ ವಿಸ್ತರಣೆ.
• ಆಶಾ ಕಾರ್ಯತರ್ಕರಿಗೆ ಸಂಭಾವನೆ ಹೆಚ್ಚಳ.
• ಗುತ್ತಿಗೆ ಪದ್ದತಿಯನ್ನ ರದ್ದು ಮಾಡುವುದು.
• ಉದ್ಯೋಗ ಭದ್ರತಾ ಯೋಜನೆ ಜಾರಿ

ಬಳಿಕ ಮಾತನಾಡಿದ ಅವರು ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ, ಅದು “ಸಾಮಾನ್ಯ ನಾಗರಿಕರು, ರೈತರು, ಕಾರ್ಮಿಕರು ಮತ್ತು ವ್ಯಾಪಾರಿಗಳ ಸರ್ಕಾರವಾಗಿರುತ್ತದೆ” ಎಂದು ರಾಹುಲ್ ಗಾಂಧಿ ಅವರು ಚುನಾವಣೆಗಾಗಿ ತಮ್ಮ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಯನ್ನು ಎತ್ತಿ ತೋರಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version