Published
8 months agoon
By
Akkare Newsಏಪ್ರಿಲ್ 29 ಸೋಮವಾರದಂದು ನೆರವೇರಲಿರುವ ಕೋಡಿಂಬಾಡಿ ಮಠಂತಬೆಟ್ಟು ಶ್ರಿ ಮಹಿಷಮರ್ದಿನಿ ದೇವಿಯ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ಧರ್ಮ ದೈವಗಳ ನೇಮೋತ್ಸವದ ಪೂರ್ವ ಭಾವಿಯಾಗಿ ಗೊನೆ ಮುಹೂರ್ತವು ಇಂದು ಬೆಳಿಗ್ಗೆ 9.20 ರ ಶುಭ ಮುಹೂರ್ತ ದಲ್ಲಿ ನೆರವೇರಿತು.
ದೇವಳದ ಪ್ರಧಾನ ಅರ್ಚಕರಾದ ಶ್ರೀ ರಾಮಕೃಷ್ಣ ಭಟ್ ರವರು ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ದೇವಿಯ ಅನೇಕ ಭಕ್ತರು ಉಪಸ್ಥಿತರಿದ್ದರು.