Published
2 years agoon
By
Akkare News
ಪುತ್ತೂರು: ನನ್ನ ಬೂತ್ ನಾನು ಅಭ್ಯರ್ಥಿ ಅಭಿಯಾನದಂತೆ ಶಾಸಕರಾದ ಅಶೋಕ್ ರೈ ಅವರು ತನ್ನ ಸ್ವ ಗ್ರಾಮದ ಬೂತ್ ನಂ: 53 ರಲ್ಲಿ ಭರ್ಜರಿ ಚುನಾವಣಾ ಪ್ರಚಾರ ಕಾರ್ಯ ನಡೆಸಿದರು.



ಕಾರ್ಯಕರ್ತರ ಜೊತೆ ತೆರಳಿದ ಶಾಸಕರು ಕೆದಿಕಂಡೆ ಗುತ್ತು, ಪಿಲಿಕುಂಡ ಮತ್ತು ಕೊಂಬಕೋಡಿ ಪರಿಸರದಲ್ಲು ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪರ ಮತ ಯಾಚನೆ ಮಾಡಿದರು. ಥೇಟ್ ಕಾರ್ಯಕರ್ತರಂತೆ ಮನೆ ಮನೆಗೆ ತೆರಳಿದ ಶಾಸಕರು ರಾಜ್ಯದ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆ ಮತ್ತು ಕೇಂದ್ರದ ಕಾಂಗ್ರೆಸ್ ಪ್ರಣಾಳಿಕೆಯನ್ನು ಮನೆ ಮನೆಗೆ ತಿಳಿಸಿದರು.








ಕಾಂಗ್ರೆಸ್ ಬೆಂಬಲಿಸುವಂತೆ ಶಾಸಕರುಮನವಿ ಮಾಡಿದರು.ಶಾಸಕರ ಜೊತೆ ಸ್ಥಳೀಯ ಕಾಂಗ್ರೆಸ್ ಮುಖಂಡರು, ಬೂತ್ ಅಧ್ಯಕ್ಷರುಗಳು ,ಕಾರ್ಯಕರ್ತರುಉಪಸ್ಥಿತರಿದ್ದರು