ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಎಂಎಲ್ಎ ಆದ್ರೆ ಪೊಲೀಸರ ಮೇಲೆ ಗಲಾಟೆ ಮಾಡ್ಬಹುದಾ – ಸಿಎಂ

Published

on

ಪುತ್ತೂರು ಮೇ 25: ಎಂಎಲ್ ಎ ಆದರೆ ಪೊಲೀಸರ ಮೇಲೆ ಗಲಾಟೆ ಮಾಡಬಹುದಾ, ಶಾಸಕರು ಕಾನೂನಿಗಿಂತಾ ದೊಡ್ಡವರಾ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ

ಎಂಎಲ್ಎ ಆದ್ರೆ ಪೊಲೀಸರ ಮೇಲೆ ಗಲಾಟೆ ಮಾಡ್ಬಹುದಾ – ಸಿಎಂ* ಪುತ್ತೂರು ಮೇ 25: ಎಂಎಲ್ ಎ ಆದರೆ ಪೊಲೀಸರ ಮೇಲೆ ಗಲಾಟೆ ಮಾಡಬಹುದಾ, ಶಾಸಕರು ಕಾನೂನಿಗಿಂತಾ ದೊಡ್ಡವರಾ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.




ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಶಾಸಕ ಹರೀಶ್ ಪೂಂಜಾ ತಪ್ಪು ಮಾಡಿದ್ದಾರೆ, ಆ ಕಾರಣಕ್ಕೆ ಪೋಲೀಸರು ಅವರ ಮೇಲೆ ಕೇಸು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿದ ಬಳಿಕ ಬಂಧನ ನಡೆಯುತ್ತದೆ, ಶಾಸಕ ಆದ್ರೆ ಕಾನೂನು ಅವರಿಗೆ ಅನ್ವಯಿಸಲ್ವಾ ಶಾಸಕರು ಕಾನೂನಿಗಿಂತ ದೊಡ್ಡವರಾ ಎಂದು ಪ್ರಶ್ನಿಸಿದರು. ಕಾನೂನು ಎಲ್ಲರಿಗೂ ಒಂದೇ ಅಲ್ವೇನ್ರೀ.. 353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದು ಬೇ ಲೇಬಲ್ ಅಫೆನ್ಸಾ ನಾನ್ ಬೇಲೆಬಲ್ ಅಪೆನ್ಸಾ? ಇದು ನಾನ್ ಬೇಲೆಬಲ್ ಅಫೆನ್ಸ್ ಇದೆ. ಈ ಪ್ರಕರಣದಲ್ಲಿ ಏಳು ವರ್ಷ ಜೈಲುವಾಸ ಇದೆ ಎಂದರು. ಹರೀಶ್ ಪೂಂಜಾ ಯಾರ ಪರವಾಗಿ ಧ್ವನಿ ಎತ್ತಿರೋದು ಅನ್ನೋದು ಗೊತ್ತಾ ಎಂದರು. ಅವರ ಮೇಲೆ ಎರಡು ಎಫ್ಐಆರ್ ದಾಖಲಾಗಿದೆ. ಎಂಎಲ್ಎ ಆದರೆ ಪೊಲೀಸರ ಮೇಲೆ ಗಲಾಟೆ ಮಾಡಬಹುದಾ ಎಂದು ಸಿಎಂ ಪ್ರಶ್ನಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version