Published
7 months agoon
By
Akkare Newsಪಂಜ ವಲಯ(ಐವತ್ತೊಕ್ಕುಕೂತ್ಕುಂಜ) ಕಾಂಗ್ರೆಸ್ ಪಕ್ಷದ ನಾಯಕರ,ಕಾರ್ಯಕರ್ತರ ಹಾಗೂ ಮತದಾರರ ಸಭೆಯನ್ನು ಮೇ.30 ಪಂಜ ವಿ.ಕೆ.ರೆಸಿಡೆನ್ಸಿ ಯಲ್ಲಿ ಸಂಜೆ ಗಂಟೆ 6 ಕ್ಕೆ ಕರೆಯಲಾಗಿದೆ.
ಸಭೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ರವರ ಗೆಲುವಿಗಾಗಿ ಕೆಲಸ ಮಾಡಿದ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಹಾಗೂ ಹೊಸ ಪಂಜ ವಲಯ ಕಾಂಗ್ರೆಸ್ ಸಮಿತಿ ರಚನೆ ನಡೆಯಲಿದೆ. ಕಲ್ಮಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಶ್ರೀಮತಿ ರಾಜೀವಿ ರೈ ಪುಡ್ಕಜೆ ಬೆಳ್ಳಾರೆ, ಅಬ್ದುಲ್ ಗಫೂರ್ ಕಲ್ಮಡ್ಕ ಪಾಲ್ಗೊಳ್ಳಲಿದ್ದಾರೆ. ಪಂಜ ವಲಯದ ಎಲ್ಲಾ ನಾಯಕರು, ಕಾರ್ಯಕರ್ತರು ಹಾಗೂ ಮತದಾರರು ಈ ಸಭೆ ಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೋಳಿಸ ಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.