Published
2 years agoon
By
Akkare News
ನೈರುತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಕೆ. ಕೆ ಮಂಜುನಾಥ್ ಕುಮಾರ್ ಹಾಗೂ ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಅತ್ಯಂತ ಬಹುಮತದಿಂದ ಗೆಲ್ಲಿಸಬೇಕೆಂದು ಬಂಟ್ವಾಳ ತಾಲೂಕಿನ ಕಕ್ಯಪದವು, ವಾಮದಪದವು, ಸಿದ್ದಕಟ್ಟೆ, ರಾಯಿ, ಉಳಿ, ಮಣಿನಾಲ್ಕೂರು, ನಯನಾಡು, ಕರ್ಪೆ, ಅರಳ, ಲೋರೋಟೊ, ಬುರೂಜ್ ಪದವಿಪೂರ್ವ ಕಾಲೇಜುಗಳಿಗೆ ಮಾಜಿ ಸಚಿವರಾದ ಬಿ. ರಮಾನಾಥ ರೈ ಯವರು ಭೇಟಿ ನೀಡಿ ಬಿರುಸಿನ ಮತಯಾಚಿಸಲಾಯಿತು.
ಈ ಸಂದರ್ಭದಲ್ಲಿ ಚುನಾವಣಾ ಉಸ್ತುವಾರಿಗಳಾದ ಕುಮಾರಿ ಅಪ್ಪಿ, ಶಶಿಕಲಾ ಪದ್ಮನಾಭ್ , ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಪ್ರಮುಖರಾದ ಪಿಯೂಸ್ ಎಲ್ ರೊಡ್ರಿಗಸ್,ಜಗದೀಶ್ ಕೊಯಿಲ, ಅಶೋಕ್ ಸಿದ್ದಕಟ್ಟೆ,ನವೀನ್ ಶೆಟ್ಟಿ, ನೆಲ್ವಿ ಸ್ಟಾರ್, ಸುಧೀರ್ ಶೆಟ್ಟಿ,ರಮೇಶ್ ಮಾಸ್ಟರ್ ರಾಯಿ, ಜಯಕರ ಸಿದ್ದಕಟ್ಟೆ, ದಿನೇಶ್ ಸಿದ್ದಕಟ್ಟೆ, ಬಾಲಕೃಷ್ಣ ಅಂಚನ್ಮೊದಲಾದವರು ಉಪಸ್ಥಿತರಿದ್ದರು.