ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

FACT CHECK | ಕ್ಯಾಡ್ಬರಿ ಡೈರಿ ಮಿಲ್ಕ್‌ ಉತ್ಪನ್ನಗಳಲ್ಲಿ “ಗೋಮಾಂಸ” ಬಳಸಲಾಗುತ್ತದೆಯೇ?

Published

on

ಭಾರತದಲ್ಲಿ ಮಾರಾಟವಾಗುವ ಕ್ಯಾಡ್ಬರಿಯ (Dairy milk) ಉತ್ಪನ್ನಗಳಲ್ಲಿ ಬಳಸುವ ಪದಾರ್ಥಗಳಲ್ಲಿ ಗೋಮಾಂಸವನ್ನು ಬಳಸಲಾಗುತ್ತದೆ ಎಂದು ಒಪ್ಪಿಕೊಂಡಿದೆ  ಎಂಬ ಸ್ಕ್ರೀನ್‌ಶಾಟ್‌ ಅನ್ನು ವಾಟ್ಸಾಪ್‌ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಕ್ಯಾಡ್ಬರಿ ಡೈರಿ ಮಿಲ್ಕ್ ಭಾರತದಲ್ಲಿ ಅಚ್ಚುಮೆಚ್ಚಿನ ಉತ್ಪನ್ನವಾಗಿದೆ. ಆದರೆ ಚಾಕೊಲೇಟ್‌ನಲ್ಲಿ ಗೋಮಾಂಸವಿದೆ ಎಂದು ಎಲ್ಲಾ ಕ್ಯಾಡ್ಬರಿ ಡೈರಿ ಮಿಲ್ಕ್ ಉತ್ಪನ್ನಗಳನ್ನು ಹಿಂದೂಗಳಿಗೆ ನಿಷೇಧಿಸಲಾಗಿದೆ ಏಕೆಂದರೆ ಅವುಗಳನ್ನು ‘ಗೋಮಾಂಸ’ದಿಂದ ತಯಾರಿಸಲಾಗುತ್ತದೆ ಎಂದು ಹೇಳುತ್ತದೆ. ಈ ಪೋಸ್ಟರ್ ಅನ್ನು ಹಂಚಿಕೊಳ್ಳುವಾಗ, ಬಳಕೆದಾರರು ತಮ್ಮ ಉತ್ಪನ್ನವು ಗೋಮಾಂಸವನ್ನು ಹೊಂದಿದೆ ಮತ್ತು ಅವರ ಎಲ್ಲಾ ಉತ್ಪನ್ನಗಳು ಹಲಾಲ್ ಪ್ರಮಾಣೀಕರಿಸಲ್ಪಟ್ಟಿದೆ ಎಂದು ಕ್ಯಾಡ್ಬರಿ ಡೈರಿ ಮಿಲ್ಕ್ ಸಂಸ್ಥೆ ಒಪ್ಪಿಕೊಂಡಿದೆ ಎಂದು ಹೇಳಲಾಗಿದ್ದು, ಕ್ಯಾಡ್ಬರಿಯ ಎಲ್ಲಾ ಉತ್ಪನ್ನಗಳು ಹಲಾಲ್ ಪ್ರಮಾಣೀಕರಿಸಿದ ಮತ್ತು ಗೋಮಾಂಸದಿಂದ ಪಡೆದ ಜೆಲಾಟಿನ್ ಅನ್ನು ಒಳಗೊಂಡಿವೆ ಎಂದು ವೆಬ್‌ಸೈಟ್ ಉಲ್ಲೇಖಿಸುತ್ತದೆ ಎಂದು ವೈರಲ್ ಪೋಸ್ಟ್‌ನಲ್ಲಿ ಹೇಳಲಾಗಿದೆ.

ಭಾರತದಲ್ಲಿ ತಯಾರಾಗುವ ಕ್ಯಾಡ್ಬರಿ ಉತ್ಪನ್ನಗಳಲ್ಲಿ  ಗೋಮಾಂಸ ಸೇರಿಸುವುದರಿಂದ ಕ್ಯಾಡ್ಬರಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ  ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಕರೆ ನೀಡಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಕ್ಯಾಡ್ಬರಿ ಉತ್ಪನ್ನಗಳಲ್ಲಿ ಗೋಮಾಂಸ ಬಳಸಲಾಗುತ್ತದೆ ಎಂಬ ಸ್ಕ್ರೀನ್‌ಶಾಟ್‌ನಲ್ಲಿ ನೀಡಲಾದ ವೆಬ್‌ಸೈಟ್‌ನ ಡೊಮೇನ್ ಹೆಸರನ್ನು ಪರಿಶೀಲಿಸಿದಾಗ, ಇದು ಆಸ್ಟ್ರೇಲಿಯಾ(.au) ಗೆ ಸೇರಿದ್ದು ಮತ್ತು ಭಾರತ(.in) ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಕಂಪನಿಯ ಭಾರತೀಯ ವೆಬ್‌ಸೈಟ್ ವೈರಲ್ ಪೋಸ್ಟ್‌ನಲ್ಲಿ ನೋಡಿದಂತೆ ಅಂತಹ ಯಾವುದೇ ಮಾಹಿತಿಯನ್ನು ಹೊಂದಿಲ್ಲ.

ಕ್ಯಾಡ್ಬರಿ ಆಸ್ಟ್ರೇಲಿಯಾದ ವೆಬ್‌ಸೈಟ್‌ನಲ್ಲಿ ಈ ಹೇಳಿಕೆ ಕುರಿತು ಹೆಚ್ಚಿನ ಮಾಹಿತಿಗಾಗಿ ಸರ್ಚ್ ಮಾಡಿದಾಗ, ಪ್ರಸ್ತುತ ವೆಬ್‌ಸೈಟ್ ವೈರಲ್ ಚಿತ್ರದಲ್ಲಿ ಕಂಡುಬರುವ ‘ಉತ್ಪನ್ನಗಳು’  ‘ಆಸ್ಟ್ರೇಲಿಯನ್ ಉತ್ಪನ್ನಗಳನ್ನು ಪ್ರತಿನಿಧಿಸುತ್ತವೆ.

18 ಜುಲೈ 2021 ರಂದು ‘ಕ್ಯಾಡ್ಬರಿ ಡೈರಿ ಮಿಲ್ಕ್’ ಮಾಡಿದ ಟ್ವೀಟ್ ಲಭ್ಯವಾಗಿದ್ದು, ವೈರಲ್ ಸ್ಕ್ರೀನ್‌ಶಾಟ್ ಭಾರತದಲ್ಲಿ ತಯಾರಿಸಲಾದ  ಉತ್ಪನ್ನಗಳಿಗೆ (ಕ್ಯಾಡ್ಬರಿಯ ಮೂಲ ಕಂಪನಿ) ಸಂಬಂಧಿಸಿಲ್ಲ ಮತ್ತು ಭಾರತದಲ್ಲಿ ತಯಾರಿಸಿದ ಮತ್ತು ಮಾರಾಟವಾಗುವ ಎಲ್ಲಾ ಉತ್ಪನ್ನಗಳು 100% ಸಸ್ಯಾಹಾರಿಗಳಾಗಿವೆ ಎಂದು ಸ್ಪಷ್ಟಪಡಿಸಿದೆ. ಉತ್ಪನ್ನಗಳ ಕವರ್ ಮೇಲೆ ಹಸಿರು ಚುಕ್ಕೆಗಳಿಂದ ಸೂಚಿಸಲಾಗುತ್ತದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version