ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಮೋದಿ ಸಚಿವ ಸಂಪುಟ ದಲ್ಲಿ ಯಾವ ಯಾವ ಖಾತೆ…ಯಾರು ಯಾರಿಗೆ… ಇಲ್ಲಿದೇ ನೋಡಿ ಫುಲ್ ಡೀಟೈಲ್ಸ್ 👇👇

Published

on

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಎನ್‌ಡಿಎ ಸರ್ಕಾರದ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಮೋದಿಯವರಿಗೆ ಪ್ರಧಾನಿ ಹುದ್ದೆಯ ಜೊತೆಗೆ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯ, ಅಣುಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ, ಎಲ್ಲಾ ಪ್ರಮುಖ ನೀತಿ ವಿಷಯಗಳು ಮತ್ತು ಯಾವುದೇ ಸಚಿವರಿಗೆ ಹಂಚಿಕೆಯಾಗದ ಎಲ್ಲಾ ಖಾತೆಗಳನ್ನು ನೀಡಲಾಗಿದೆ.

ಹಿರಿಯ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಅವರಿಗೆ ಕ್ರಮವಾಗಿ ಗೃಹ, ರಕ್ಷಣೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆಗಳನ್ನೇ ಮತ್ತೊಮ್ಮೆ ನೀಡಲಾಗಿದೆ.

ಮಾಜಿ ಸಿಎಂಗಳಾದ ಮನೋಹರ್ ಲಾಲ್‌ ಖಟ್ಟರ್‌ಗೆ ಇಂಧನ, ವಸತಿ ಮತ್ತು ನಗರ ವ್ಯವಹಾರಗಳು, ಶಿವರಾಜ್ ಸಿಂಗ್ ಚೌಹಾಣ್‌ಗೆ ಕೃಷಿ, ಜಿತನ್‌ ರಾಮ್‌ ಮಾಂಜಿಗೆ ಮಧ್ಯಮ ಮತ್ತು ಸಣ್ಣ ಕೈಗಾರಿಕೆ, ಹೆಚ್‌.ಡಿ ಕುಮಾರಸ್ವಾಮಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆಯ ಹೊಣೆ ಹೊರಿಸಲಾಗಿದೆ.

ಅಶ್ವಿನಿ ವೈಷ್ಣವ್ ಅವರಿಗೆ ರೈಲ್ವೆ ಖಾತೆಯನ್ನು ಮತ್ತೊಮ್ಮೆ ನೀಡಲಾಗಿದ್ದು, ಹೆಚ್ಚುವರಿಯಾಗಿ ಮಾಹಿತಿ ಮತ್ತು ಪ್ರಸಾರ ಖಾತೆಯನ್ನು ಪಡೆದುಕೊಂಡಿದ್ದಾರೆ.

ಸಂಪೂರ್ಣ ಪಟ್ಟಿ ಇಲ್ಲಿದೆ  

ಟಿಡಿಪಿ ಸಂಸದ ರಾಮ್ ಮೋಹನ್ ನಾಯ್ಡು ಅವರಿಗೆ ನಾಗರಿಕ ವಿಮಾನಯಾನ, ಗುಜರಾತ್‌ನ ಬಿಜೆಪಿ ಸಂಸದ ಕಾರ್‌ ಪಾಟೀಲ್‌ ಅವರಿಗೆ ಜಲಶಕ್ತಿ ಮತ್ತು ಕಿರಣ್ ರಿಜಿಜು ಅವರಿಗೆ ಸಂಸದೀಯ ವ್ಯವಹಾರಗಳ ಖಾತೆಯ ನೀಡಲಾಗಿದೆ.

ಧರ್ಮೇಂದ್ರ ಪ್ರಧಾನ್‌ ಶಿಕ್ಷಣ ಖಾತೆ ಮತ್ತು ಭೂಪೇಂದ್ರ ಯಾದವ್ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆಗಳನ್ನು ಮತ್ತೊಮ್ಮೆ ಪಡೆದಿದ್ದಾರೆ. ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೆ ಆರೋಗ್ಯ ಖಾತೆಯ ಜವಾಬ್ದಾರಿ ವಹಿಸಲಾಗಿದೆ.

ಜ್ಯೋತಿರಾದಿತ್ಯ ಸಿಂಧಿಯಾಗೆ ಟೆಲಿಕಾಂ ಖಾತೆ, ಅನ್ನಪೂರ್ಣ ದೇವಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ, ಹರ್ದೀಪ್ ಪುರಿ ಅವರಿಗೆ ಪೆಟ್ರೋಲಿಯಂ, ಸರ್ಬಾನಂದ್ ಸೋನೋವಾಲ್‌ಗೆ ಶಿಪ್ಪಿಂಗ್, ನಿತೀಶ್ ಕುಮಾರ್ ಆಪ್ತ ಲಲನ್ ಸಿಂಗ್‌ಗೆ ಪಂಚಾಯತ್ ರಾಜ್ ಖಾತೆ ನೀಡಲಾಗಿದೆ.

ಪಿಯೂಷ್ ಗೋಯಲ್ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯನ್ನು ಮತ್ತೊಮ್ಮೆ ಪಡೆದಿದ್ದು, ಎರಡನೇ ಮೋದಿ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ ಪ್ರಲ್ಹಾದ್ ಜೋಶಿ ಅವರಿಗೆ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆಗಳನ್ನು ನೀಡಲಾಗಿದೆ.

ಜೆಡಿಯು ಸಂಸದ ರಾಮ್ ನಾಥ್ ಠಾಕೂರ್ ಅವರು ಕೃಷಿ ಸಚಿವಾಲಯದ ಕಿರಿಯ ಸಚಿವರಾಗಿ ನೇಮಕಗೊಂಡಿದ್ದಾರೆ. ಆರ್‌ಎಲ್‌ಡಿ ಸಂಸದ ಜಯಂತ್ ಚೌಧರಿ ಅವರನ್ನು ಕೌಶಲ್ಯ, ಉದ್ಯಮಶೀಲತೆ ಸಚಿವಾಲಯಕ್ಕೆ ನಿಯೋಜಿಸಲಾಗಿದೆ. ಕಲ್ಲಿದ್ದಲು, ಗಣಿ ಸಚಿವರಾಗಿ ಜಿ ಕಿಶನ್ ರೆಡ್ಡಿ ಅವರನ್ನು ನೇಮಕಗೊಳಿಸಲಾಗಿದೆ.

ಒಡಿಶಾದ ಬಿಜೆಪಿ ಸಂಸದ ಜುಯಲ್ ಓರಾಮ್ ಅವರಿಗೆ ಬುಡಕಟ್ಟು ವ್ಯವಹಾರಗಳ ಸಚಿವಾಲಯವನ್ನು ಹಂಚಿಕೆ ಮಾಡಲಾಗಿದೆ. ಗಿರಿರಾಜ್ ಸಿಂಗ್ ಅವರನ್ನು ಜವಳಿ ಸಚಿವರನ್ನಾಗಿ ನೇಮಿಸಲಾಗಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version