Published
6 months agoon
By
Akkare Newsಪುತ್ತೂರು: ಕುಂಬ್ರದ ಶೇಖಮಲೆ ಎಂಬಲ್ಲಿ ಆಲ್ಲೋ ಕಾರು ಮತ್ತು ಬೊಲೆರೊ ನಡುವೆ ಪರಸ್ಪರ ಡಿಕ್ಕಿಯಾಗಿದ್ದು ಆಲ್ಲೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಮೃತಪಟ್ಟವರು ಮಡಿಕೇರಿ ಮೂಲದ ರವೀಂದ್ರ ಹಾಗೂ ಲೊಕೇಶ್ ಎಂದು ತಿಳಿದುಬಂದಿದೆ.
ಮಂಗಳೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಆಲ್ಲೊ ಕಾರು ಕುಂಬ್ರದ ಶೇಖಮಲೆಯಲ್ಲಿ ಬೈಕಿಗೆ ಮೊದಲು ಡಿಕ್ಕಿ ಆಗಿತ್ತು. ನಂತರ ನಿಯಂತ್ರಣ ತಪ್ಪಿದ ಕಾರು ಪುತ್ತೂರು ಕಡೆಗೆ ಬರುತ್ತಿದ್ದ ಬೊಲೆರೋ ಕಾರಿಗೆ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಆಲ್ಲೋ ಕಾರಿನಲ್ಲಿದ್ದ ಇರ್ವರು ಮೃತಪಟ್ಟಿದ್ದು, ಬೈಕ್ ಸವಾರನಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.