Published
2 years agoon
By
Akkare News
ಪುತ್ತೂರು,ಜೂ. 16: ಸುಳ್ಯ ತಾಲ್ಲೂಕಿನ ಆನೆಗುಂಡಿ ಅರಣ್ಯ ದಾಟಿದೆ ಎಂದು ಅರಣ್ಯ ಅಧಿಕಾರಿಗಳಿಂದ ಅಕ್ಕರೆ ನ್ಯೂಸ್ ಗೆ ಮಾಹಿತಿ ದೊರತ್ತಿದೆ.ಇನ್ನೂ ಕೆಲವೇ ಕಿಲೋ ಮೀಟರ್ ಮುಂದುವರಿಸಿದರೆ ಕೇರಳ ತಲುಪಲಿದೆ.ಅರಣ್ಯ ಇಲಾಖೆ ಸಿಬ್ಬಂದಿಗಳು ಸತ್ತಾಯ ಗತಾಯ ಆನೆ ಯನ್ನು ಓಡಿಸುವ ಪ್ರಯತ್ನ ವನ್ನು ಮುಂದುವರಿಸಿ ಯಶಸ್ವಿ ಯಾಗಿದ್ದಾರೆ.
ಶಾಸಕರಾದ ಅಶೋಕ್ ಕುಮಾರ್ ರೈ ಯವರ ಸೂಚನೆ ಮೇರೆಗೆ ಸುಮಾರು 30 ಮಂದಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಇದೀಗ ಪುತ್ತೂರು ತಾಲ್ಲೂಕುನಿಂದ ಆನೆ ಯನ್ನು ಗಡಿಪಾರು ಮಾಡುವಲ್ಲಿ ಅರಣ್ಯ ಇಲಾಖೆ ಯಶಸ್ವಿ ಯಾಗಿದೆ. ಶಾಸಕರು ಈ ಸಂದರ್ಭದಲ್ಲಿ ಇಲಾಖೆ ಯನ್ನು ಅಭಿನಂದಿಸಿದ್ದಾರೆ.