Published
6 months agoon
By
Akkare Newsಮಂಗಳೂರು :(ಜು.6) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಪೇಜಾವರ ಸ್ವಾಮಿಗಳು ಟೀಕೆ ಮಾಡಿರುವುದನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಖಂಡಿಸಿದ್ದಾರೆ. ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಮಾತ್ರ ಹಿಂದೂಗಳಲ್ಲ. ಹಿಂದೂ ಸಮಾಜವನ್ನು ಬಿಜೆಪಿಗೆ ಒತ್ತೆ ಇಟ್ಟಿಲ್ಲ. ಬಡವರಿಗೆ ಆಸೆ ಆಮಿಷ ಒಡ್ಡಿದ್ದರಿಂದ 300 ಸೀಟ್ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅಂದರೆ ಹಿಂದೂ ಸಮಾಜ ಅಂತ ಬಿಂಬಿಸ್ತಿದೀರಿ. ನನಗೆ 6.14+ ಲಕ್ಷ ಮತ ಸಿಕ್ಕಿದೆ. 3+ ಲಕ್ಷ ಹಿಂದೂಗಳ ಮತ ಬಿದ್ದಿದೆ.
ಹಿಂದೂಗಳನ್ನು ಬಿಜೆಪಿ ಗುತ್ತಿಗೆ ಕೊಟ್ಟವರಂತೆ ಮಾತಾಡ್ತಿದೀರಿ. ಜನರ ಸಮಸ್ಯೆ ಮಾತಾಡುವವರನ್ನೇ ದಮನಿಸೋ ಆಡಳಿತ ನೀತಿ ಉಗ್ರ ಖಂಡಿಸ್ತೇವ ಎಂದು ಹೇಳಿದರು.
ರಾಮಮಂದಿರ ಸ್ಪಷ್ಟನೆ ನೀಡಿದಕ್ಕೆ ಕಿಡಿ! .
ಇನ್ನು ಇದೆ ವೇಳೆ ಪೇಜಾವರ ಶ್ರೀ ರಾಮ ಮಂದಿರ ಸೋರಿಕೆ ಬಗ್ಗೆ ಸ್ಪಷ್ಟನೆ ನೀಡಿದಕ್ಕೆ ಪದ್ಮರಾಜ್ ಕಿಡಿಕಾರಿದ್ರು.
ಅಯೋಧ್ಯೆ ರಾಮ ಮಂದಿರದ ಫಸ್ಟ್ ಫ್ಲೋರ್ ಕೆಲಸ ಆಗಿಲ್ಲ ಒಂದು ವರ್ಷ ಬೇಕು ಅಂತೀರಿ. ನೀವು ಸದಸ್ಯರೂ ಹೌದು, ಮಂದಿರ ಕೆಲಸ ತರಾತುರಿಯಲ್ಲಿ ಕೆಲಸ ಆಗದೆ ಉದ್ಘಾಟನೆ ಮಾಡಿದ್ದು ರಾಜಕೀಉ ಆಮಿಷ ಅಲ್ವಾ? ಎಂದು ಪದ್ಮರಾಜ್ ಪ್ರಶ್ನಿಸಿದ್ರು.